ಬಂಟ್ಚಾಳ: ಲಯನ್ಸ್ ಕ್ಲಬ್ ಬಂಟ್ವಾಳ ಇದರ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಪದಗ್ರಹಣ ಅಧಿಕಾರಿ ಪೂರ್ವ ಜಿಲ್ಲಾ ಗವರ್ನರ್ ಡಾ. ಗೀತ್ ಪ್ರಕಾಶ್ ಮಾತನಾಡಿ ಪರೋಪಕಾರ ಕಾಟಚಾರವಾಗದೆ ನಿಜಾರ್ಥದ ಸೇವೆಯನ್ನು ನೀಡಬೇಕು.
ನಾವು ಮಾಡುವ ಉತ್ತಮ ಕಾರ್ಯಗಳಿಂದ ನಮ್ಮ ಜೀವಿತಾವಧಿಯಲ್ಲಿಯೇ ಸ್ವರ್ಗ ವನ್ನು ಸೃಷ್ಟಿಸಲು ಸಾಧ್ಯವಿದೆ ಅಂತಹ ಸೇವಾ ಕಾರ್ಯವನ್ನು ಲಯನ್ಸ್ ಕ್ಲಬ್ ಮಾಡುತ್ತಿದ್ದು ಲಯನ್ಸ್ ಕ್ಲಬ್ ನ ಸದಸ್ಯರು ಭಾಗ್ಯವಂತರು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುದ್ರೋಳಿ ಗೋಕರ್ಣ ಕ್ಷೇತ್ರದ ಕೋಶಾಧಿಕಾರಿ, ನ್ಯಾಯವಾದಿ ಪದ್ಮರಾಜ್ ಆರ್. ಮಾತನಾಡಿ ಲಯನ್ಸ್ ಶಿಸ್ತು ಬದ್ದ ಹಾಗೂ ಸ್ವಾರ್ಥ ರಹಿತ ಸೇವೆಯನ್ನು ನೀಡುವ ಸಂಸ್ಥೆಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಹಾಗೂ ಪ್ರೋತ್ಸಾಹ ನೀಡುವ ಕಾರ್ಯ ಲಯನ್ಸ್ ಕ್ಲಬ್ ನಿಂದ ಆಗಬೇಕಾಗಿದೆ. ಸರಕಾರದ ಯೋಜನೆಗಳನ್ನು ಅರ್ಹ ಜನರಿಗೆ ಮುಟ್ಟಿಸುವ ಕಾರ್ಯ ಲಯನ್ಸ್ ನಂತಹ ಸೇವಾ ಸಂಸ್ಥೆಗಳಿಂದ ಆಗಬೇಕು ಎಂದರು.
ನೂತನ ಅಧ್ಯಕ್ಷ ಪ್ರಶಾಂತ್ ಕೋಟ್ಯಾನ್ ಮಾತನಾಡಿ 50 ವರ್ಷಗಳಲ್ಲಿ ಲಯನ್ಸ್ ಕ್ಲಬ್ ಬಂಟ್ವಾಳ ಜನಪರ ಸೇವೆಗಳ ಮೂಲಕ ಜನಮಾನಸದಲ್ಲಿ ವಿಶೇಷ ಛಾಪು ಮೂಡಿಸಿದೆ ಎಂದರು. ನಿರ್ಗಮನ ಅಧ್ಯಕ್ಷ ಉಮೇಶ್ ಆಚಾರ್ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಅಜೀವ
ಈ ಸಂದರ್ಭ ನೂತನ ಸದಸ್ಯರನ್ನು ಕ್ಲಬ್ ಗೆ ಸೇರಿಸಲಾಯಿತು. ನೂತನ ಅಧ್ಯಕ್ಷರಾಗಿ ಪ್ರಶಾಂತ್ ಕೋಟ್ಯಾನ್, ಕಾರ್ಯದರ್ಶಿ ಯಾಗಿ ಸುನೀಲ್ ಬಿ., ಕೋಶಾಧಿಕಾರಿಯಾಗಿ ಕೇಶವ ಆಚಾರ್ಯ, ಲಿಯೋ ಅಧ್ಯಕ್ಷರಾಗಿ ಧನ್ಯ ಅಗ್ರಬೈಲು ಸೇರಿಂದತೆ ಇತರ ಎಲ್ಲಾ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಎಸ್ ಎಸ್ ಎಲ್ ಸಿ ಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ಸಹಿತ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಲೆ , ಕಾಲೇಜು ಹಾಗೂ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ನೀಡಲಾಯಿತು. ಪೊಲೀಸರಿಗೆ ರೈನ್ ಕೋಟ್ ನೀಡಲಾಯಿತು. ಲಕ್ಕಿಕೂಪನ್ ಬಿಡುಗಡೆಗೊಳಿಸಲಾಯಿತು.
ಅಜೀವ ಸದಸ್ಯತನ ಪಡೆದ ಕ್ಲಬ್ ಸ್ಥಾಪಕಾಧ್ಯಕ್ಷ ಡಾ. ವಸಂತ ಬಾಳಿಗರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ನಿಕಟ ಪೂರ್ವ ಮಲ್ಟಿಪಲ್ ಕೌನ್ಸಿಲ್ ಚೆಯರ್ ಮನ್ ವಸಂತ ಕುಮಾರ್ ಶೆಟ್ಟಿ,
ಓಸ್ವಾಲ್ಡ್ ಡಿಸೋಜಾ, ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿ, ವಲಯಾಧ್ಯಕ್ಷ ಡೋನಾಲ್ಡ್ ಬಂಟ್ವಾಳ್ ,
ಗಾಯತ್ರಿ ಗೀತ್ ಪ್ರಕಾಶ್, ಸ್ಥಾಪಕಾಧ್ಯಕ್ಷ ಡಾ. ವಸಂತ ಬಾಳಿಗ, ನಿರ್ಗಮನ ಕಾರ್ಯದರ್ಶಿ ಶಿವಾನಂದ ಬಾಳಿಗ, ನಿರ್ಗಮನ ಕೋಶಾಧಿಕಾರಿ ಜಗದೀಶ್ ಬಿ.ಎಸ್. ಹಾಗೂ
ಲಿಯೋ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿರ್ಗಮನ ಅಧ್ಯಕ್ಷ ಉಮೇಶ್ ಆಚಾರ್ ಸ್ವಾಗತಿಸಿದರು, ಸದಸ್ಯ ರಾಧಕೃಷ್ಣ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುನೀಲ್ ಬಿ. ವಂದಿಸಿದರು.