ಬಂಟ್ವಾಳ: ಜೆಸಿಐ ಬಂಟ್ವಾಳದ ನೇತೃತ್ವದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿಗಳು, ಎಸ್ಡಿಎಂಸಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಹಕಾರದಲ್ಲಿ ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಗೆ ನಿರ್ಮಾಣಗೊಂಡ ಜ್ಞಾನ ಜ್ಯೋತಿ ರಂಗಮಂದಿರವನ್ನು ಜೆಸಿಐನ ರಾಷ್ಟ್ರೀಯ ಅಧ್ಯಕ್ಷ ಕಾರ್ತಿಕೇಯನ್ ಮಂಗಳವಾರ ಉದ್ಘಾಟಿಸಿ ಶಾಲೆಗೆ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಅವರು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ರಂಗ ಮಂದಿರ ಅತ್ಯಂತ ಅಗತ್ಯವಾಗಿದ್ದು ಜೆಸಿಐ ಬಂಟ್ವಾಳ ಇದನ್ನು ಶಾಲೆಗೆ ಒದಗಿಸಿಕೊಟ್ಟಿರುವುದು ಶ್ಲಾಘನೀಯ ಎಂದರು. ವಲಯ ೧೫ರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಶುಭ ಕೋರಿದರು. ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ಅಧ್ಯಕ್ಷತೆ ವಹಿಸಿದ್ದರು.
ಜೆಸಿಐನ ರಾಷ್ಟ್ರೀಯ ಅಧ್ಯಕ್ಷ ಕಾರ್ತಿಕೇಯನ್ ಅವರನ್ನು ಘಟಕಕ್ಕೆ ಅಧಿಕೃತ ಭೇಟಿ ನೀಡಿದ ಹಿನ್ನಲೆಯಲ್ಲಿ ಅವರ್ನು ಸನ್ಮಾನಿಸಲಾಯಿತು. ರಂಗ ಮಂದಿರ ನಿರ್ಮಾಣಕ್ಕೆ ಸಹಕರಿಸಿದ ಲೋಕೇಶ್ ಸುವರ್ಣ, ಯತೀಶ್ ಕರ್ಕೆರಾ, ಅಶ್ವಿನ್ ಮುಂಡಾಜೆ ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ವಲಯ ಉಪಾಧ್ಯಕ್ಷ ಅಜಿತ್ ಕುಮಾರ್ ಕೆ. ಜೆಸಿಐ ಬಂಟ್ವಾಳದ ಕಾರ್ಯದರ್ಶಿ ರಶ್ಮಿ ಶೆಟ್ಟಿ, ನಿಕಟಪೂರ್ವಾಧ್ಯಕ್ಷ ರೋಷನ್ ರೈ, ಶಾಲಾ ಉಪಪ್ರಾಂಶುಪಾಲೆ ಆಲಿಸ್ ಪಾಯಿಸ್, ಎಸ್ಡಿಎಂಸಿ ಅಧ್ಯಕ್ಷ ಜಯಪ್ರಕಾಶ್ ಪೆರ್ವ, ಸದಸ್ಯರಾದ ಸೀತಾರಾಮ ಅಗೊಳಿಬೆಟ್ಟು, ದಿನಕರ್, ಜೆಸಿಐನ ವಲಯಾಧಿಕಾರಿಗಳು, ಜೆಸಿಐ ಬಂಟ್ವಾಳದ ಸದಸ್ಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.