ಬಂಟ್ವಾಳ: ಬಿ.ಸಿ.ರೋಡಿನ ಪೊಲೀಸ್ ಲೈನ್ ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದ ಶ್ರೀ ನಾಗದೇವರ ಸಾನಿಧ್ಯದಲ್ಲಿ ಪುನರ್ ನವೀಕರಣಗೊಳ್ಳುತ್ತಿರುವ ಮಹಾಗಣಪತಿ ಮತ್ತು ಶಾಸ್ತಾರ ದೇವರ ಗರ್ಭಗುಡಿಯೊಂದಿಗೆ ಸುತ್ತುಪೌಳಿಯ ನಿರ್ಮಾಣಕ್ಕೆ ಸೋಮವಾರ ಶಿಲಾನ್ಯಾಸ ನೆರವೇರಿಸಲಾಯಿತು.
ದೇವಸ್ಥಾನದ ತಂತ್ರಿಗಳಾದ ಅರವತ್ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ದೇವಳದ ಪ್ರಧಾನ ಅರ್ಚಕರಾದ ಈಶ್ವರ ಭಟ್ ಅವರು ವಿವಿಧ ವೈಧಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಪೊಳಲಿ ಶ್ರೀ ರಾಮಕೃಷ್ಣ ತಪೋವನದ
ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಅವರು ಶಿಲಾನ್ಯಾಸ ನೆರವೇರಿಸಿ,ನಿಗದಿತ ಸಮಯದಲ್ಲಿ ದೇವಳದ ಎಲ್ಲಾ ಜೀರ್ಣೋದ್ದಾರ ಕಾರ್ಯಗಳು ಸಾಂಗವಾಗಿ ನೆರವೇರಲಿ ಎಂದು ಆಶೀರ್ವದಿಸಿದರು.
ವಾಸ್ತು ಶಿಲ್ಪಿ ಮಹೇಶ್ ಭಟ್ ಮುನಿಯಂಗಳ್,ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು,ಮಾಜಿ ಸಚಿವ ರಮಾನಾಥ ರೈ,ಬಂಟ್ವಾಳ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್,ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ,
ಪ್ರಧಾನ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷರಾದ ಆನಂದ .ಕೆ,ಕೇಪುಗೌಡ,
ಬಿ.ಸಿ.ರೋಡು ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಿಶ್ವನಾಥ್ .ಬಿ, ಶ್ರೀ ಚಂಡಿಕಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಅಧ್ಯಕ್ಷ ಲ.ಲೋಕನಾಥ ಶೆಟ್ಟಿ,ಬಂಟ್ವಾಳ ನಗರ ಠಾಣೆಯ ಎಸ್ .ಐ ಗಳಾದ ರಾಮಕೃಷ್ಣ, ಕಲೈಮಾರ್,ಗ್ರಾಮಾಂತರ ಠಾಣೆಯ ಎಸ್. ಐ.ಹರೀಶ್, ನ್ಯಾಯವಾದಿ ಉಮೇಶ್ ಕುಮಾರ್ ವೈ,ಪ್ರಮುಖರಾದ ಪುಷ್ಪರಾಜ ಶೆಟ್ಟಿ, ಬಾಲಕೃಷ್ಣ ಗೌಡ, ಸದಾನಂದ ಶೆಟ್ಟಿ ರಂಗೋಲಿ,ಬೇಬಿಕುಂದರ್, ಮಾತೃಸಂಘದ ಪದಾಧಿಕಾರಿಗಳು,ಪೊಲೀಸ್ ಸಿಬ್ಬಂದಿಗಳು ಸ್ಥಳೀಯ ಭಕ್ತ ಸಮೂಹ ಪಾಲ್ಗೊಂಡಿದ್ದರು
2024 ರ ಫೆ.21 ರಿಂದ ದೇವಳದ ಬ್ರಹ್ಮಕಲಶ ಆರಂಭವಾಗಲಿದ್ದು, ಅನ್ನಛತ್ರ,ಅರ್ಚಕರ ವಸತಿಗೃಹ ಸಹಿತ ವಿವಿಧ ಅಭಿವೃದ್ಧಿಕಾರ್ಯಗಳನ್ನು ನಡೆಸಲು ನೀಲನಕ್ಷೆ ತಯಾರಿಸಲಾಗಿದ್ದು,ದಾನಿಗಳ ಹಾಗೂ ಭಕ್ತ ಸಮೂಹದ ಸಹಕಾರವನ್ನು ದೇವಳದ ಆಡಳಿತ ಮಂಡಳಿ ಯಾಚಿಸಿದೆ.