ಬಂಟ್ವಾಳ: ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್ ವತಿಯಿಂದ ರವಿವಾರ ಬಿ.ಸಿ.ರೋಡ್ನಲ್ಲಿ ಸಂಭ್ರಮಾರಣೆ ನಡೆಯಿತು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ ಅವರು, ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಘೊಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆಯಲಾಗಿದೆ. ಇನ್ನು ನಾಲ್ಕು ಗ್ಯಾರಂಟಿಗಳು ಶೀಘ್ರವೇ ಜಾರಿಯಾಗಲಿದೆ. ಆ ಮೂಲಕ ದೇಶದಲ್ಲಿ ಕರ್ನಾಟಕ ಇಂದು ಮಾದರಿ ರಾಜ್ಯವಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಸುದೀಪ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯರಾದ ಜಯಂತಿ ವಿ.ಪೂಜಾರಿ, ಲವಿನಾ ವಿಲ್ಮಾ ಮೊರಾಸ್, ಜಿ.ಪಂ. ಮಾಜಿ ಸದಸ್ಯರಾದ ಚಂದ್ರ ಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಪುರಸಭೆ ಮಾಜಿ ಅಧ್ಯಕ್ಷ ಮೊಹಮ್ಮದ್ ಶರೀಫ್, ಮಾಜಿ ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಮಾಜಿ ಸದಸ್ಯರಾದ ವಾಸು ಪೂಜಾರಿ ಲೊರೆಟ್ಟೋ, ಲೊಲಾಕ್ಷ ಶೆಟ್ಟಿ, ಸಿದ್ದೀಕ್ ಗುಡ್ಡೆಯಂಗಡಿ, ಅಸೈನಾರ್ ಪ್ರಮುಖರಾದ ಅಶ್ವಿನ್ ಕುಮಾರ್ ರೈ, ಚರಿಷ್ಮಾ ಆರ್.ರೈ, ಫ್ಲೋಸಿ ಡಿಸೋಜಾ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಸುದರ್ಶನ್ ಜೈನ್, ಸುರೇಶ್ ಜೋರಾ, ಇಬ್ರಾಹಿಂ ನವಾಜ್, ಮಂಜುಳಾ ಕುಶಾಲಪ್ಪ ಗೌಡ, ಧನಲಕ್ಷ್ಮಿ ಬಂಗೇರಾ, ಐಡಾ ಸುರೇಶ್, ಮಲ್ಲಿಕಾ ವಿ.ಶೆಟ್ಟಿ, ಸುರೇಶ್ ಕುಲಾಲ್, ಅಸ್ಮಾ ಅಜೀಜ್, ಜಾಸ್ಮಿನ್ ಡಿಸೋಜಾ, ಅಬ್ಬಾಸ್ ಅಲಿ, ರೋಶನ್ ರೈ, ಇಬ್ರಾಹಿಂ ಕೈಲಾರ್, ಜಗದೀಶ್ ಕೊಯ್ಲ, ಸದಾನಂದ ಶೆಟ್ಟಿ, ಮಂಜುಳಾ ಸದಾನಂದ, ಧನವಂತಿ ಶೆಟ್ಟಿ,ಮೋಹನ್ ಬಿ., ಪ್ರವೀಣ್ ಜಕ್ರಿಬೆಟ್ಟು, ವಲಾರ್, ಸಂದೇಶ್ ಶೆಟ್ಟಿ, ಜಯಶ್ರೀ ಇರ್ವತ್ತೂರು, ನಾರಾಯಣ್ ನಾಯ್ಕ್, ಅನ್ವರ್ ಕೊರೊಪ್ಪಾಡಿ, ಚಂದ್ರಶೇಖರ್ ಪೂಜಾರಿ, ಸುಧಾಕರ್ ಶೆಣೈ, ಉಮೇಶ್ ಬೊಳಂತೂರು, ಉಮೇಶ್ ನಾಯ್ಲ, ವಿಜಯ ಅಲ್ಲಿಪ್ಪಾದೆ, ವೆಂಕಪ್ಪ ಪೂಜಾರಿ, ಬಾಲಕೃಷ್ಣ ಆಳ್ವ, ವಿಲ್ಸನ್ ಡಿಸೋಜಾ, ಆಲ್ಬರ್ಟ್ ಮಿನೇಜಸ್, ಭಾರತೀ ರಾಜೇಂದ್ರ, ವಿಶ್ವನಾಥ ಗೌಡ, ದಾಮೋದರ ಪೂಜಾರಿ ಮೊದಲಾದವರಿದ್ದರು