
ಬಂಟ್ವಾಳ: ಇಲ್ಲಿನ ಪುರಸಭೆಯ ವತಿಯಿಂದ ನನ್ನ ಲೈಪ್- ನನ್ನ ಸ್ವಚ್ಛನಗರ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಬಿ.ಸಿ.ರೋಡಿನ ಕೈಕಂಬ ಬಳಿಕ ಪರ್ಲಿಯಾ ಹಾಗೂ ಕೊಡಂಗೆ ಬಳಿ ನಡೆಯಿತು.

ಮಂಗಳೂರು ನಗರ ಯೋಜನಾ ಕೋಶದ ಯೋಜನಾ ನಿರ್ದೇಶಕ ಅಭಿದ್ ಗದ್ಯಾಲ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಆರೋಗ್ಯ ನಿರೀಕ್ಷಕ ರತ್ನ ಪ್ರಸಾದ್, ಪ್ರಮುಖರಾದ ವಸಂತಿ ಗಂಗಾಧರ್, ಎ. ದಾಮೋದರ ಸಂಚಯಗಿರಿ, ಮಚ್ಚೇಂದ್ರ ಸಾಲ್ಯಾನ್, ಕಿಶೋರ್ ಆಚಾರ್ಯ ಪುರಸಭೆಯ ಸಿಬ್ಬಂದಿಗಳು, ಪೌರ ಕಾರ್ಮಿಕರು ಹಾಗೂ ಸ್ಥಳೀಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


