ಬಂಟ್ವಾಳ: ಜೇಸಿಐ ಬಂಟ್ವಾಳ ಇದರ ಆತಿಥ್ಯದಲ್ಲಿ ಸಿಎಪಿಪಿ ತರಬೇತಿ ಕಾರ್ಯಗಾರ ಭಾನುವಾರ ಬಂಟವಾಳದ ಬಂಟರ ಭವನದಲ್ಲಿ ನಡೆಯಿತು. ತರಬೇತಿ ವಿಭಾಗದ ನಿರ್ದೇಶಕಿ ಅಕ್ಷತಾ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು, ವಲಯಾಧ್ಯಕ್ಷ ಅಶೋಕ್ ಚೂಂತಾರು, ವಲಯ ಉಪಾಧ್ಯಕ್ಷ ದಾಮೋದರ ಪಾಠಾಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಂತರಾಷ್ಟ್ರೀಯ ತರಬೇತುದಾರ ಪಲನಿವೇಲು ತರಬೇತಿ ಕಾರ್ಯಗಾರ ನಡೆಸಿಕೊಟ್ಟರು. ಜೇಸಿಐ ಬಂಟ್ವಾಳದ ಅಧ್ಯಕ್ಷ ಯತೀಶ್ ಕರ್ಕೇರಾ ಸ್ವಾಗತಿಸಿದರು, ಕಾರ್ಯದರ್ಶಿ ಉಮೇಶ್ ಪೂಜಾರಿ ವಂದಿಸಿದರು, ಸಂಯೋಜಕ ನಾಗೇಶ್ ಬಾಳೆಹಿತ್ಲು, ನಿಕಟಪೂರ್ವಾಧ್ಯಕ್ಷ ದಯಾನಂದ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೇಸಿ ಸಿಎಪಿಪಿ ತರಬೇತಿ ಕಾರ್ಯಗಾರ
