ಬಂಟ್ವಾಳ: ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ನ್ಯಾಯವಾದಿ, ಕೆಪಿಸಿಸಿ ಮಾಜಿ ಸದಸ್ಯ ಅಶ್ವನಿ ಕುಮಾರ್ ರೈ ಹೇಳಿದರು.
ಬಂಟ್ವಾಳದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಳು ಪ್ರಚಾರ ಮಾಡಿ ಅಧಿಕಾರಕ್ಕೆ ಬರುವ ಬಿಜೆಪಿಯ ಪ್ರಯತ್ನಕ್ಕೆ ತಿಲಂಜಲಿ ನೀಡ ಬೇಕು, ಜನರು ಯಾವಾಗಲೂ ಮೂರ್ಖರಾಗುವುದಿಲ್ಲ ಎಂದ ಅವರು ಕಾಂಗ್ರೆಸ್ ತಾನು ನೀಡಿದ ಭರವಸೆಯಿಂದ ಎಂದೂ ಹಿಂದೆ ಸರಿದಿಲ್ಲ, ಆರ್ಥಿಕತೆಯನ್ನು ಹೇಗೆ ನಿರ್ವಹಣೆ ಮಾಡಬೇಕು ಎನ್ನುವುದು ಕಾಂಗ್ರೆಸ್ಗೆ ತಿಳಿದಿದೆ. ಪ್ರಸ್ತುತ ಬಂಟ್ವಾಳ ಕ್ಷೇತ್ರವನ್ನು ಗೆಲ್ಲುವ ವಾತವರಣ ಹಾಗೂ ಅವಕಾಶ ಕಾಂಗ್ರೆಸ್ ಪಕ್ಷಕ್ಕೆ ಇದ್ದು ಜನತೆ ಆಶೀರ್ವಾದ ಮಾಡುತ್ತಾರೆ ಎಂದು ತಿಳಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ ತನ್ನನ್ನು ಆಯ್ಕೆ ಮಾಡಿದ ಮತದಾರರಿಗೋಸ್ಕರ ಸಾಕಷ್ಟು ಕೆಲಸಗಳನ್ನು ಮಾಡಿದ್ದು ಬಂಟ್ವಾಳದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸ್ಪರ್ಧಿಸುವ ಕಡೆಯ ಚುನಾವಣೆ ಇದಾಗಿದ್ದು, ಅವರನ್ನು ಗೆಲ್ಲಿಸುವುದು ನಮ್ಮೆಲ್ಲರ ಗುರಿಯಾಗಿದೆ, ಕ್ಷೇತ್ರದ ಜನತೆಗೂ ಇದೆ. ತನಗೆ ನೀಡಿದ ಅವಕಾಶದಲ್ಲಿ ರಮಾನಾಥ ರೈ ಅವರು ಜನರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದು, ಅವರ ಕೆಲಸದ ಕುರಿತು ಗೌರವವಿದ್ದು, ಅವರ ಗೆಲುವಿಗೆ ಶ್ರಮಿಸುತ್ತೇನೆ. ಕೊನೆಯ ಬಾರಿ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಅವರನ್ನು ಗೆಲ್ಲಿಸುವ ಜವಾಬ್ದಾರಿ ಕ್ಷೇತ್ರದ ಜನರಿಗಿದೆ. ಕಳೆದ ಬಾರಿ ಅಪಪ್ರಚಾರದಿಂದ ಸೋಲಾಯಿತು. ಇನ್ನೊಂದು ಬಾರಿ ಸರ್ವಾಂಗೀಣ ಕೆಲಸ ಮಾಡಬೇಕೆಂದಿದ್ದರೆ ರಮಾನಾಥ ರೈಗಳನ್ನು ಗೆಲ್ಲಿಸಬೇಕು. ರಾಜಧರ್ಮವನ್ನು ಪಾಲಿಸದ ವಚನಭ್ರಷ್ಟ ಸರಕಾರ ಈಗಿದೆ. ಸಿದ್ದರಾಮಯ್ಯ ಸರಕಾರ ಇದ್ದಾಗ ನಾವು ಭರವಸೆ ಈಡೇರಿಸಿದ್ದರೆ, ಬಿಜೆಪಿ ಅದರ ಅವಧಿಯಲ್ಲಿ ಮಾಡಿಲ್ಲ. ಅದು ಅತ್ಯಂತ ಜನವಿರೋಧಿಯಾಗಿದ್ದು, ಭ್ರಷ್ಟಾಚಾರ ಕೇಂದ್ರಿತವಾಗಿದೆ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ರಾಜ್ಯ ಬಿಜೆಪಿ ಸರಕಾರದ ನೀತಿ ಯೋಜನೆಗಳನ್ನು ಅವರು ಕಟುವಾಗಿ ಟೀಕಿಸಿ, ಕಾಂಗ್ರೆಸ್ ಒಂದೇ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಪಕ್ಷ ಎಂದರು.
ಪ್ರಮುಖರಾದ ಪಿಯೂಸ್ ಎಲ್.ರೋಡ್ರಿಗಸ್, ಪದ್ಮಶೇಖರ ಜೈನ್, ಸುದರ್ಶನ ಜೈನ್, ಬಿ.ಎಚ್.ಖಾದರ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಲುಕ್ಮಾನ್ ಬಂಟ್ವಾಳ, ಅಬ್ಬಾಸ್ ಆಲಿ, ಪ್ರವೀಣ್ ಬಿ., ಚಂದ್ರಶೇಖರ ಪೂಜಾರಿ, ಉಮೇಶ್ ಬೋಳಂತೂರು, ಸುಭಾಶ್ಚಂದ್ರ ಶೆಟ್ಟಿ, ಕೆ.ಸಂಜೀವ ಪೂಜಾರಿ, ಬಿ.ಮೋಹನ್, ಕುಶಾಲ, ಜೆಸಿಂತಾ ಡಿಸೋಜ, ಜಯಂತಿ ಪೂಜಾರಿ, ನಾರಾಯಣ ನಾಯ್ಕ್, ಮಹಮ್ಮದ್ ರಫೀಕ್, ಸದಾಶಿವ ಬಂಗೇರ, ಇಬ್ರಾಹಿಂ ನವಾಜ್, ಸುರೇಶ್ ಜೋರ, ಲವೀನಾ ವಿಲ್ಮಾ ಮೊರಾಸ್, ಮಹಮ್ಮದ್ ವಳವೂರು, ಪರಮೇಶ್ವರ ಮೂಲ್ಯ, ಬಾಲಚಂದ್ರ ಶೆಟ್ಟಿ, ಮನೋಹರ ನೇರಂಬೋಳ್, ಮಹಮ್ಮದ್ ನಂದರಬೆಟ್ಟು, ರೋಷನ್ ರೈ, ಪದ್ಮನಾಭ ಸಾಮಂತ್ , ಪಿ.ಎ, ಉಮೇಶ್ ನೆಲ್ಲಿಗುಡ್ಡೆ, ತಿಮ್ಮಪ್ಪ ಪೂಜಾರಿ, ಮಹಮ್ಮದ್ ನಂದರಬೆಟ್ಟು, ರಹೀಂ, ಇಬ್ರಾಹಿಂ ಕೈಲಾರ್, ಜೋಸ್ಪಿನ್ ಡಿಸೋಜಾ, ಮೋಹನ ಗೌಡ ಕಲ್ಮಂಜ ಮತ್ತಿತರರು ಉಪಸ್ಥಿತರಿದ್ದರು.
—