ಬಂಟ್ಚಾಳ: ತಾಲೂಕಿನಾದ್ಯಂತ ಮನೆಮಾತಾಗಿರುವ ಪ್ರತಿಷ್ಠಿತ ಭದ್ರ ಗ್ಯಾಸ್ ಏಜೆನ್ಸಿ ಸಂಸ್ಥೆಯ ವಿವಿಧ ಹುದ್ದೆಗಳಿಗೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಸಂಸ್ಥೆಯ ನೂತನ ಮಳಿಗೆಯೊಂದು ಬಂಟ್ಚಾಳದಲ್ಲಿ ಆರಂಭಗೊಳ್ಳಲಿದ್ದು ಉದ್ಯೋಗಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಸೇಲ್ಸ್ ಎಕ್ಸಿಕ್ಯುಟಿವ್ (ಪುರುಷರು)-5, ಸೇಲ್ಸ್ ಎಕ್ಸಿಕ್ಯುಟಿವ್ (ಮಹಿಳೆಯರು)-5, ಅಕೌಂಟೆಂಟ್-1, ತ್ರಿಚಕ್ರ ವಾಹನ ಚಾಲಕರು-2, ಹುದ್ದೆಗಳಿದ್ದು ಆಸಕ್ತರು ಭದ್ರ ಹೋಂ ಅಪ್ಲೈಯೆನ್ಸಸ್, ಅಗ್ನಿಶಾಮಕ ಠಾಣೆಯ ಮುಂಭಾಗ, ಬಸ್ತಿಪಡ್ಪು, ಬಂಟ್ವಾಳ ಇಲ್ಲಿಗೆ ಮುಖತಃ ಅರ್ಜಿ ಸಲ್ಲಿಸ ಬಹುದಾಗಿದೆ.
ಎ.10 ಅರ್ಜಿ ಸಲ್ಲಿಸಲು ಕೊನೆಯ ದಿನ. ಸೇಲ್ಸ್ ಎಕ್ಸಿಕ್ಯುಟಿವ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಸೂಪರ್ ಮಾರ್ಕೆಟ್ ಅಥವಾ ಮಾರ್ಕೆಟಿಂಗ್ ಕ್ಷೆತ್ರದಲ್ಲಿ ಅನುಭವ ಹೊಂದಿದವರಿಗೆ ಪ್ರಥಮ ಆದ್ಯತೆ, ಬಂಟ್ವಾಳ ತಾಲೂಕಿನ ಉದ್ಯೋಗಾಕ್ಷಿಗಳಿಗೆ ಮೊದಲ ಪ್ರಾಶಸ್ತ್ಯ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Advertisement