
ಬಂಟ್ವಾಳ: ವಿಧಾನ ಸಭಾ ಚುನಾವಣೆ 2023 ಕರ್ತವ್ಯಕ್ಕೆ ನಿಯೋಜಿಸಿರುವ 205-ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅಧಿಕಾರಿ (ಪ್ರಿಸೆಡಂಗ್ ಆಫೀಸರ್) ಮತ್ತು ಸಹಾಯಕ ಮತಗಟ್ಟೆ ಅಧಿಕಾರಿ (ಅಸಿಸ್ಟೆಂಟ್ ಪ್ರಿಸೈಡಿಂಗ್ ಆಫೀಸರ್) ಗಳಿಗೆ ಎ.9 ರಂದು ಬಿ.ಮೂಡಾ ಗ್ರಾಮದ ಮೊಡಂಕಾಪು ಇನ್ಸೆಂಟ್ ಜೀಸಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ತರಬೇತಿಗೆ ಹಾಜರಾಗಲು ತಿಳಿಸಲಾಗಿತ್ತು. ಆದರೆ ಪದವಿ ಪೂರ್ವ ಪರೀಕ್ಷೆಯ ಮೌಲ್ಯಮಾಪನ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ನಡೆಯುತ್ತಿರುವುದರಿಂದ ಹಲವಾರು ಮತಗಟ್ಟೆ ಅಧಿಕಾರಿಗಳಿಗೆ ತರಬೇತಿಗೆ ಹಾಜರಾಗಲು ಅಸಾಧ್ಯವಾಗಿರುತ್ತದೆ ಎಂದು ತಿಳಿದುಬಂದಿರುವುದರಿಂದ ಈಗಾಗಲೇ ನಿಗದಿಪಡಿಸಲಾದ ತರಬೇತಿಯನ್ನು ಎ.16 ಭಾನುವಾರ ಬೆಳಗ್ಗೆ 9 ಗಂಟೆಗೆ ಮುಂದೂಡಲಾಗಿರುತ್ತದೆ. ತರಬೇತಿಗೆ ನಿಯೋಜನೆಗೊಂಡ ಎಲ್ಲರೂ ಈಗಾಗಲೇ ತಿಳಿಸಿರುವ ತರಬೇತಿ ಕೇಂದ್ರದಲ್ಲಿ ಕಡ್ಡಾಯವಾಗಿ ತರಬೇತಿಗೆ ಹಾಜರಾಗಬೇಕು ಎಂದು ಚುನಾವಣಾಧಿಕಾರಿ ಅಭಿದ್ ಗದ್ಯಾಲ್ ತಿಳಿಸಿದ್ದಾರೆ.

