ಬಂಟ್ವಾಳ: ರಾಜಕೀಯ ಆಟದಲ್ಲಿ ದ್ವೇಷ ಅಸಹನೆಯಿಂದ ದೇಶ ಕಟ್ಟಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ಎಂ.ಜಿ. ಹೆಗ್ಡೆ ಹೇಳಿದರು.
ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ 14 ದಿನಗಳ ಕಾಲ ನಡೆಯುತ್ತಿರುವ ಬಂಟ್ವಾಳ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು.
ಟೀಕೆಯನ್ನು, ಪ್ರಶ್ನೆಯನ್ನು ಆರೋಗ್ಯಪೂರ್ಣವಾಗಿ ಸ್ವೀಕರಿಸದೇ ಇರುವುದೇ ಫ್ಯಾಸಿಸಂ. ಇಂತಹ ವರ್ತನೆಯ ಬಿಜೆಪಿಗೆ ಮುಳುವಾಗುತ್ತಿದೆ. ಪ್ರಜಾಪ್ರಭುತ್ವ ದ ಸೌಂದರ್ಯ ಇರುವುದೇ ಜನರು ಪ್ರಶ್ನೆ ಕೇಳುವುದರಲ್ಲಿ.ರಸ್ತೆ ಸರಿಯಿಲ್ಲ ಎಂದವರ ಮೇಲೆ ಕೇಸು ಹಾಕಲಾಗುತ್ತಿದೆ ಎಂದರು.
ರಾಜಕೀಯ ಅಭಿವೃದ್ಧಿ ಯ ಆಟ ಆಗಬೇಕೆ ಹೊರತು ದ್ವೇಷ, ಅಸಹನೆಯ ಆಟ ಆಗಬಾರದು. ದ್ವೇಷದ ರಾಜಕಾರಣದಿಂದ ನಮ್ಮ ದೇಶದ ರಾಜಕಾರಣದ ಮೌಲ್ಯ ಶಿಥಿಲವಾಗುತ್ತಿದೆ, ಚುನಾವಣೆ ದೇಶದೊಳಗಿನ ಆಟ.ಆಟದಲ್ಲಿ ಆಟಗಾರರನ್ನು ಗೆಲ್ಲಿಸುವ ಜವಾಬ್ದಾರಿ ದೇಶದ ನಾಗರಿಕರದ್ದು. ಆ ಆಟದಲ್ಲಿ ಗಲಾಟೆ ಮಾಡಿಕೊಂಡು ಆಸ್ಪತ್ರೆ, ಮಸಣ ಸೇರುವುದು ಸರಿಯೇ? ಎಂದು ಪ್ರಶ್ನಿಸಿದ ಅವರು ದುಡಿಮೆಯ ಯೋಚನೆ ಬರುವವನಿಗೆ ಮತೀಯವಾದದ ಯೋಚನೆ ಬರುವುದಿಲ್ಲ ಎಂದು ತಿಳಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ
ಜನಪ್ರತಿನಿಧಿಯಾಗಿ ಅವಕಾಶ ಸಿಕ್ಕಾಗ ನನ್ನಿಂದಾಗುವ ಸೇವೆಯನ್ನು ಎಲ್ಲಾ ಧರ್ಮದ ಧಾರ್ಮಿಕ ಕೇಂದ್ರಕ್ಕೆ ನೀಡಿದ್ದೇನೆ, ದ್ವೇಷದಿಂದ ಏನನ್ನೂ ಗೆಲ್ಲಲು ಸಾಧ್ಯವಿಲ್ಲ, ಪ್ರೀತಿಯಿಂದ ಜಗತ್ತನ್ನೇ ಗೆಲ್ಲ ಬಹುದು ಎಂದರು.
ನಾನು ಸೋತಿರುವುದಕ್ಕೆ ಬೇಸರವಿಲ್ಲ, ಸೋಲಿಸಿದ ರೀತಿಗೆ ದು:ಖವಿದೆ. ನನನ್ನು ಜನ ಮಾನಸದಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಮಾನಸಿಕ ಹಿಂಸೆ ನೀಡಲಾಗಿದೆ. ನಾನು ನಿರಪರಾಧಿ ಎಂದು ಸಾಬೀತು ಪಡಿಸಲು ಜನರು ಮತ್ತೊಮೆ ಶಕ್ತಿ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಯಾತ್ರೆಯ ಸಂಚಾಲಕ ಪಿಯೂಸ್ ಎಲ್. ರೋಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪಕ್ಷ ಪ್ರಮುಕರಾದ ಸುದರ್ಶನ್ ಜೈನ್, ಕೆ.ಸಂಜೀವ ಪೂಜಾರಿ, ಸಂಪತ್ ಕುಮಾರ್ ಶೆಟ್ಟಿ, ಜಯಂತಿ ಪೂಜಾರಿ, ಮಹಮ್ಮದ್ ಶರೀಫ್, ಜೆಸಿಂತಾ ಡಿಸೋಜಾ, ಐಡಾ ಸುರೇಶ್, ಪದ್ಮನಾಭ ಸಾಮಂತ, ಚಿತ್ತರಂಜನ್ ಶೆಟ್ಟಿ, ಉಮೇಶ್ ಬೋಳಂತೂರು, ಜೋಸ್ಫಿನ್ ಡಿಸೋಜಾ, ಸುನೀತಾ ಪದ್ಮನಾಭ , ಚಂದ್ರಶೇಖರ ಪೂಜಾರಿ, ಪದ್ಮನಾಭ ರೈ, ವಾಸು ಪೂಜಾರಿ, ಉಮೇಶ್ ಕುಲಾಲ್, ಮನೊಹರ ನೆರಂಬೋಳು,ಕೃಷ್ಣಪ್ಪ ಪೂಜಾರಿ ನಾಟಿ, ಆಲ್ಬರ್ಟ್ ಮಿನೇಜಸ್, ಪ್ರಸಾದ್ ಗಾಣಿಗ, ಅರುಣ್ ಕುಮಾರ್ ಶೆಟ್ಟಿ, ಗ್ರಾ.ಪಂ ಸದಸ್ಯ ರಿಯಾಝ್, ತಾ.ಪಂ. ಮಾಜಿ ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ
ಮತ್ತಿತರರು ಉಪಸ್ಥಿತರಿದ್ದರು.
ಪ್ರಕಾಶ್ ಕಾರಂತ್ ಹಾಗೂ ಎಡ್ತೂರು ರಾಜೀವ ಶೆಟ್ಟಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.
ಬಾಲಕೃಷ್ಣ ಆಳ್ವ ಕೋಡಾಜೆ ಕಾರ್ಯಕ್ರಮ ನಿರೂಪಿಸಿದರು.