ಬಂಟ್ವಾಳ: ಪಕ್ಷ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿಕೊಂಡು ಬಂದಿದ್ದೇನೆ. ಕ್ಷೇತ್ರ ವ್ಯಾಪ್ತಿಯಲ್ಲಿ ನನ್ನ ಶಕ್ತಿ ಮೀರಿ ಕೆಲಸ ನಿರ್ವಹಿಸಿದ ತೃಪ್ತಿ ನನಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಅವರು ಕುಕ್ಕಿಪ್ಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು. ತಾ.ಪಂ. ಮಾಜಿ ಸದಸ್ಯ ಪ್ರಭಾಕರ ಪ್ರಭು ಮಾತನಾಡಿ ಮತದಾರ ಪಟ್ಟಿಗೆ ಯುವ ಮತದಾರರನ್ನು ಸೇರಿಸಿ ಮತ್ತೊಮ್ಮೆ ರಾಜೇಶ್ ನಾಯ್ಕ್ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಬೇಕು. ಅವರು ಶಾಸಕನಾಗಿ ನಿಷ್ಠೆ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ್ದಾರೆ. ಎಂದರು.
ಈ ಸಂದರ್ಭ ಶಾಸಕರು ಕುಕ್ಕಿಪ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಕುಂಡದ ಬೆಟ್ಟು ದೇವಸ ರಸ್ತೆ ಕಾಂಕ್ರೀಟ್, ಮಾಡಮೆ ಕಲ್ಕೂರಿ ರಸ್ತೆ ಮರುಡಾಮಾರೀಕರಣ, ಕೋರ್ಯಾರು ದೇವಸ್ಥಾನ ರಸ್ತೆ ಕಾಂಕ್ರೀಟ್, ಸಿದ್ದಕಟ್ಟೆ ಚರ್ಚ್ ಅಂಗನವಾಡಿ , ದೇವಸ ಕಲ್ಲಬೆಟ್ಟು ರಸ್ತೆ ಮರು ಕಾಂಕ್ರೀಟ್, ನೇಲ್ಯಕುಮೇರು ಹಲಾಯಿ ರಸ್ತೆ ಕಾಂಕ್ರೀಟ್, ಉಮ್ಮೊಟ್ಟು ಸ್ಮಶಾನ, ಮಾವಿನ ಕಟ್ಟೆ ಕೆಂತಲೆ, ಮಾವಿನಕಟ್ಟೆ ಕೊಡಂಬೆಟ್ಟು, ಎಲ್ಪೇಲು ಅಂಗನವಾಡಿ, ಎಲ್ಪೇಲು ಕೇಪುಲಗುಡ್ಡೆ ರಸ್ತೆ, ಎಲ್ಪೇಲು- ಕೊಪ್ಪಳ ರಸ್ತೆ, ಎಲ್ಪೇಲು ಬಸ್ಸು ನಿಲ್ದಾಣ ಉದ್ಘಾಟಿಸಿದರು.
ಈ ಸಂದರ್ಭ ಕುಕ್ಕಿಪ್ಪಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ, ಉಪಾಧ್ಯಕ್ಷ ಯೋಗೀಶ್ ಆಚಾರ್ಯ, ಸದಸ್ಯರಾದ ಚಂದ್ರ ಪೂಜಾರಿ, ಬೇಬಿ ದೇವಸ, ಪೂರ್ಣಿಮ ರವಿರಾಜ್, ಶೇಖರ್ ಮತ್ತಿತರರು ಉಪಸ್ಥಿತರಿದ್ದರು.