
ಬಂಟ್ವಾಳ: ಯುವಕ ವೃಂದ ಮಂಚಿ ಕಟ್ಟೆ ಇದರ ಬೆಳ್ಳಿಹಬ್ಬ ಸಂಭ್ರಮದ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಯುವಕ ವೃಂದದ ನೂತನ ಕಟ್ಟಡ ಉದ್ಘಾಟನ ಸಮಾರಂಭ ಮಾ. 12ರಂದು ನಡೆಯಲಿದೆ.
ಬೆಳಿಗ್ಗೆ 6ಗಂಟೆಗೆ ನೂತನ ಕಟ್ಟಡದಲ್ಲಿ ಗಣಹೋಮ ನಡೆಯಲಿದೆ. ಬಳಿಕ ಮಂಚಿಕಟ್ಟೆಯ ಅಶ್ವಥ ಕಟ್ಟೆಯಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಮಿತ್ತಾಳ ಶ್ರೀ ರಾಘವ ಆಚಾರ್ ದೀಪಪ್ರಜ್ವಲಿಸುವರು, ಬೆಳಿಗ್ಗೆ 10 ರಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಪ್ರಾರಂಭಗೊಳ್ಳಲಿದೆ, 12.30ಕ್ಕೆ ಭಜನಾ ಮಂಗಲೋತ್ಸವ, ಮಹಾಮಂಗಳರಾತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೬ರಿಂದ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಎಂ. ಗೋಪಾಲ ಆಚಾರ್ ಮಂಚಿ ಹಾಗೂ ಮಿತ್ತಾಳ ರಘುನಾಥ ಆಚಾರ್ ಮಂಚಿ, ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಮೋಂತಿಮಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೋಕ್ತೇಸರ ಸತೀಶ್ಚಂದ್ರ ಎಸ್.ಆರ್. ಮತ್ತಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.