ಮಡಂತ್ಯಾರು: ಹುಬ್ಬಳ್ಳಿ ನಗರದ ಗೋಕುಲ್ ಗಾರ್ಡನ್ ನಲ್ಲಿ ಜನವರಿ 21, 22 ರಂದು ಇಂಟರ್ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ ಶಿಪ್- 2023 ಕರಾಟೆ ಸ್ಪರ್ಧಾ ಕೂಟವು ನಡೆಯಿತು.
ಈ ಸ್ಪರ್ಧಾ ಕೂಟವನ್ನು ಹುಬ್ಬಳ್ಳಿಯ ಎಕ್ಸ್ಟ್ರೀಮ್ ಸ್ಪೋರ್ಟ್ಸ್ ಅಕಾಡೆಮಿ ಕರಾಟೆ ಸಂಸ್ಥೆಯು ಆಯೋಜಿಸಿತ್ತು. ಬೆಳ್ತಂಗಡಿ ತಾಲೂಕಿನಿಂದ ಶೋನಿಕಾ ವಿ ಆರ್ ಬಂಗೇರ ಹುಡುಗಿಯರ ಹದಿನೆಂಟು ವರ್ಷದ ವಯೋಮಿತಿಯಲ್ಲಿ ಬ್ಲಾಕ್ ಬೆಲ್ಟ್ ವಿಭಾಗದ ಕಟಾದಲ್ಲಿ ಪ್ರಥಮ, ಕುಮಿತೆಯಲ್ಲಿ ಪ್ರಥಮ ಸ್ಥಾನ ಪಡೆದು ಎರಡು ಚಿನ್ನದ ಪದಕ ಮತ್ತು ಪ್ರಮಾಣ ಪತ್ರ ಪಡೆದು ವಿಶೇಷ ಸಾಧನೆ ಮಾಡಿರುತ್ತಾರೆ. ಈ ಸ್ಪರ್ಧಾ ಕೂಟಕ್ಕೆ ಭಾಗವಹಿಸಲು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಪ್ರಾಯೋಜಕತ್ವ ನೀಡಿದ್ದು ಕರಾಟೆ ನಿರ್ದೇಶಕ ಶಿಹಾನ್ ವಸಂತ ಕೆ.ಬಂಗೇರ ಮತ್ತು ಬಿ.ಕೆ. ರೇಖಾ ಪಾರೆಂಕಿ ದಂಪತಿಗಳ ಪುತ್ರಿಯಾಗಿರುತ್ತಾರೆ. ರಾಜ್ಯ ಸರಕಾರದ ಯೋಜನೆಯಡಿಯಲ್ಲಿ ಹೆಣ್ಣುಮಕ್ಕಳಿಗೆ ಸ್ವಂರಕ್ಷಣೆ ಕಲೆ ತರಬೇತಿ ನೀಡುವ ಜಿಲ್ಲೆಯ ಕರಾಟೆ ತರಬೇತಿ ಶಿಕ್ಷಕಿಯಾಗಿ ಮಡಂತ್ಯಾರು ಬಿ.ಸಿ.ಯಂ ಹಾಸ್ಟೆಲ್, ಮಚ್ಚಿನ ಮೊರಾರ್ಜಿ ವಸತಿ ಶಾಲೆಯ ಕರಾಟೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿನಿಯಾಗಿರುತ್ತಾರೆ.