ಬಂಟ್ವಾಳ: ಜೆಸಿಐ ಸಂಸ್ಥೆ ನೀಡುವ ಸಾಧನಶ್ರೀ ಪ್ರಶಸ್ತಿಯನ್ನು ಈ ವರ್ಷ ಜೆಸಿಐ ಬಂಟ್ವಾಳದ ಕಾರ್ಯದರ್ಶಿ ರೋಷನ್ ರೈ ಪಡೆದುಕೊಂಡಿದ್ದಾರೆ. ಕುಂದಾಪುರ ಕೋಟೇಶ್ವರದ ಕೃಷ್ಣ ಸಹನಾ ಕನ್ವೇನ್ಸನ್ ಸಭಾಂಗಣದಲ್ಲಿ ನಡೆದ ಜೆಸಿ ವಲಯ ೧೫ರ ವಲಯ ವ್ಯವಹಾರ ಸಮ್ಮೇಳನದಲ್ಲಿ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆಯವರಿಂದ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭ ವಲಯ ಉಪಾಧ್ಯಕ್ಷ ಶರತ್ ಕುಮಾರ್, ಜೆಸಿಐ ಬಂಟ್ವಾಳದ ಅಧ್ಯಕ್ಷ ಉಮೇಶ್ ಆರ್.ಮೂಲ್ಯ, ವ್ಯವಹಾರ ವಿಭಾಗದ ಚೆಯರ್ಮನ್ ಸಮದ್ಖಾನ್ ಮೊದಲಾದವರು ಉಪಸ್ಥಿತರಿದ್ದರು.