ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಲುವೆರ್ ಕುಡ್ಲ ಮತ್ತು ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಸಹಯೋಗದಲ್ಲಿ ಅ.30ರಂದು ಉರ್ವಸ್ಟೋರ್ನ ತುಳು ಭವನದಲ್ಲಿ ತುಳು ಸಬಿಸವಾಲ್ -2 ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ತುಳುನಾಡಿನ ವೈಭವ, ಕಲೆ, ಸಂಸ್ಕೃತಿ, ವಿಚಾರಗಳ ಮೆಲುಕು ಹಾಕುವ ಕಾರ್ಯಕ್ರಮದಲ್ಲಿ ತುಳು ಭಾಷೆ, ಸಂಸ್ಕೃತಿ, ಆಚರಣೆಗಳು, ಆಚಾರ -ವಿಚಾರಗಳು, ಒಗಟು, ಗಾದೆ ಮಾತುಗಳು, ಜಾನಪದ ಕುಣಿತಗಳು, ಸಿನಿಮಾ, ನಾಟಕ, ಯಕ್ಷಗಾನ, ರಂಗಭೂಮಿ, ದೇವಸ್ಥಾನ, ದೈವಸ್ಥಾನಗಳು, ಹಬ್ಬಗಳು, ಕಂಬಳ, ಆಟ, ತುಳುನಾಡಿನ ಸಾಧಕರ ವಿಷಯದಲ್ಲಿ ಪ್ರಶ್ನೆಗಳು ಇರಲಿವೆ.
ಬೆಳಗ್ಗೆ 9.30ಕ್ಕೆ ಸ್ಪರ್ಧೆ ಆರಂಭವಾಗಲಿದ್ದು, 10 ವರ್ಷ ಮೇಲ್ಪಟ್ಟವರು ಇಬ್ಬರ ತಂಡವಾಗಿ ಭಾಗವಹಿಸಬಹುದು. ಮೊದಲ ಸುತ್ತಿನಲ್ಲಿ ಲಿಖಿತ ಪರೀಕ್ಷೆ ಇರಲಿದ್ದು, ಅದರಲ್ಲಿ ಎಂಟು ತಂಡವನ್ನು ಫೈನಲ್ಗೆ ಆರಿಸಲಾಗುವುದು. ಮೊದಲ ಮೂರು ಸ್ಥಾನ ಪಡೆದವರಿಗೆ ನಗದು ಬಹುಮಾನ ನೀಡಲಾಗುವುದು. ಹೆಸರು ನೋಂದಣಿ ಮತ್ತು ಮಾಹಿತಿಗಾಗಿ ಸಂಪರ್ಕ: 9901319694, 9449990789.