ಬಂಟ್ವಾಳ: ಕಳೆದ ಭಾನುವಾರ ಜೆಸಿಐ ಮುಲ್ಕಿ ಶಾಂಭವಿ ಆತಿಥ್ಯದಲ್ಲಿ ಮುಲ್ಕಿಯ ವಿಜಯ ಕಾಲೇಜಿನಲ್ಲಿ ನಡೆದ ಜೇಸಿರೆಟ್ ಹಾಗೂ ಮಹಿಳಾ ಜೇಸಿಸ್ ಸಮ್ಮೇಳನ ಸಿಂಧೂರ, ಫ್ಯಾಶನ್ ಷೋ ಸ್ಪರ್ಧೆಯಲ್ಲಿ ಬಂಟ್ವಾಳ ಜೇಸಿರೆಟ್ ತಂಡ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಪಾಸ್ಟಿಕ್ನಿಂದ ನದಿ ನೀರು ಹಾಗೂ ಜಲಚರಗಳ ರಕ್ಷಣೆಯ ವಿಷಯಾಧರಿತವಾಗಿ ಬಂಟ್ವಾಳ ಜೇಸಿರೆಟ್ ತಂಡ ಫ್ಯಾಷನ್ ಶೋ ಪ್ರದರ್ಶನ ನೀಡಿತ್ತು. ಜೇಸಿಐ ಬಂಟ್ವಾಳದ ಅಧ್ಯಕ್ಷ ಉಮೇಶ್ ಆರ್. ಮೂಲ್ಯ, ಜೆಸಿರೆಟ್ ಅಧ್ಯಕ್ಷೆ ವಿದ್ಯಾ ಉಮೆಶ್ ಹಾಗೂ ಜೆಸಿರೆಟ್ ಸದಸ್ಯರು ವಲಯಾಧ್ಯಕ್ಷ ಸೌಜನ್ಯ ಹೆಗ್ಡೆ ಅವರಿಂದ ಬಹುಮನ ಸ್ವೀಕರಿಸಿದರು. ಜೆಸಿ ಸದಸ್ಯ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಜೆಸಿರೆಟ್ ತಂಡ ಈ ಫ್ಯಾಶನ್ ಶೋ ಪ್ರದರ್ಶನ ನೀಡಿದೆ. ಸ್ಪರ್ಧೆಯಲ್ಲಿ ಜೇಸಿರೆಟ್ ಸದಸ್ಯರಾದ ವಿದ್ಯಾ, ರಶ್ಮಿ ಶೆಟ್ಟಿ, ಜೀವಿತಾ, ಬಬಿತಾ, ಸವಿತಾ, ಲಿಖಿತ ಸುರಕ್ಷಾ ಭಾಗವಹಿಸಿದ್ದರು.