ಬಂಟ್ವಾಳ: ದಕ್ಷಿಣದ ಅಯೋಧ್ಯೆ ಪ್ರತೀತಿಯ ಧರ್ಮಸ್ಥಳ ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೆ, ಶ್ರೀ ರಾಮತಾರಕ ಮಂತ್ರ ಸಪ್ತಾಹ ಎ. 7 ರಿಂ 14ರ ತನಕ ಸದ್ಗರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿ ನೇತೃತ್ವದಲ್ಲಿ ನಡೆಯಲಿದೆ. ಎಂದು ಶ್ರೀ ರಾಮ ಕ್ಷೇತ್ರದ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಕೆ. ಸಂಜೀವ ಪೂಜಾರಿ ತಿಳಿಸಿದ್ದಾರೆ. 59ನೇ ವರ್ಷದ ಮಹಾ ಬ್ರಹ್ಮರಥೋತ್ಸವ ವೈದಿಕ ಕ್ರಮಗಳು ಆಗಮ ಶಾಸ್ತ್ರ ಪ್ರವೀಣ ಗೋಪಾಲಾಚಾರ್ಯರ ನೇತೃತ್ವದಲ್ಲಿ ನಡೆಯುವುದು. ಎ.7ರಂದು ಬೆಳಗ್ಗೆ 9ಗಂಟೆಗೆ ಶ್ರೀರಾಮನಾಮ ಸಪ್ತಾಹ ಅಖಂಡ ನಂದಾದೀಪ ಜ್ಯೋತಿಯನ್ನು ಮಾಜಿ ಶಾಸಕ ಕೆ. ವಸಂತ ಬಂಗೇರ ಬೆಳಗುವರು, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಉಪಸ್ಥಿತಿಯಲ್ಲಿ ನಡೆಯಲಿದೆ. ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ರಾಮನಾಮ ತಾರಕ ನಾಮೋಚ್ಚರಣೆ ಮಾಡುವರು. ಎ. 7ರಂದು ವಿವಿಧ ಧಾರ್ಮಿಕ ವೈದಿಕ ಪೂಜೆ ಪುನಸ್ಕಾರಗಳು, ಸಂಜೆ 7ಕ್ಕೆ ಬಲಿ ಉತ್ಸವ ಪೂಜೆಗಳು, ಎ.8ರಂದು ವಿವಿಧ ದೇವರ ಪೂಜೆ ಎ.9ರಂದು ನವಗ್ರಹ ಶಾಂತಿ ಹೋಮ, ವಿಶೇಷ ಪೂಜೆ, ಮಹಾಪೂಜೆ, ರಜತ ಪಾಲಕಿ ಉತ್ಸವ, ಎ. 10 ರಂದು ಫುಷ್ಪ ರಥೋತ್ಸವ, ಎ. 11ರಂದು ಚಂದ್ರಮಂಡಲ ರಥೋತ್ಸವ, ಎ. 12ರಂದು ಬೆಳ್ಳಿ ರಥೋತ್ಸವ, ಮಾ. 13ರಂದು ಬೆಳಗ್ಗೆ ದತ್ತಯಾಗ, ವಿಶೇಷ ಮಹಾಪೂಜೆ, ಅನ್ನ ಸಂತರ್ಪಣೆ, ವಿವಿಧ ಧಾರ್ಮಿಕ ವಿಶೇಷಗಳು, ಶ್ರೀ ಹನುಮಾನ್ ರಥೋತ್ಸವ ಕಟ್ಟೆಪೂಜೆ, ಕೆರೆ ದೀಪೋತ್ಸವ ನಡೆಯಲಿದೆ. ಎ. 14ರಂದು ಬೆಳಗ್ಗೆ 6ರಿಂದ ವಿವಿಧ ಧಾರ್ಮಿಕ ವೈದಿಕ ಅಲಂಕಾರ, ಪೂಜೆ, ಬಲಿ ಉತ್ಸವ ಕಾರ್ಯಕ್ರಮಗಳು, ಸಾರ್ವಜನಿಕ ಅನ್ನ ಸಂತರ್ಪಣೆ ಸಂಜೆ 7ಗಂಟೆಗೆ ಶ್ರೀದೇವರ ಪಾಲಕಿ ಬಲಿ ಉತ್ಸವ ಮಹಾ ಬ್ರಹ್ಮ ರಥೋತ್ಸವ, ಅವಭೃತ ಓಕುಳಿ, ಬಳಿಕ ಕ್ಷೇತ್ರದ ಶ್ರೀ ರಕ್ತೇಶ್ವರಿ, ಗುಳಿಗ ದೈವಗಳಿಗೆ ನೇಮೋತ್ಸವ ನಡೆಯುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೆ
