ಬಂಟ್ವಾಳ: ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ವತಿಯಿಂದ ಕೈಕಂಬ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು ಪರಿಸರವನ್ನು ಸ್ವಚ್ಛ ಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಎಸ್ ಆರ್ ಪದ್ಮನಾಭ ರೈ ಕಾರ್ಯದರ್ಶಿ ಪಲ್ಲವಿ ಕಾರಂತ್, ಪ್ರಶಾಂತ್ ಕಾರಂತ್, ಗಣೇಶ್ ಶೆಟ್ಟಿ, ದಯಾನಂದ ಶೆಟ್ಟಿ, ದಯಾನಂದ ರೈ, ಆಶಾಮಣಿ, ಜ್ಯೋತಿಂದ್ರ ಶೆಟ್ಟಿ, ಸುಧೀರ್ ಶೆಟ್ಟಿ, ಸುಂದರ್ ಬಂಗೇರ, ಸೀತಾರಾಮ್ ಶೆಟ್ಟಿ ಭುವನೇಶ್ ,ದಿವಕರ್ ಶೆಟ್ಟಿ, ಸದಾಶಿವ ಬೊಂಡಲ, ಅಲ್ಬರ್ಟ್ ಮಿನೇಜಸ್ ಮೊದಲಾದವರು ಭಾಗವಹಿಸಿದ್ದರು.