ಬಂಟ್ವಾಳ: ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್, ರೋಟರಿ ಕ್ಲಬ್ ಬಿ.ಸಿ.ರೋಡು ಸಿಟಿ, ರೋಟರಿ ಕ್ಲಬ್ ಮೊಡಂಕಾಪು ಹಾಗೂ ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಕ್ಲಬ್ಗಳ ಜಂಟಿ ಸಭೆ ಸಮ್ಮಿಲ ಹಾಗೂ ಶಿಕ್ಷಕರ ದಿನಾಚರಣೆ ಬುಧವಾರ ಸಂಜೆ ಲೊರೆಟ್ಟೊಪದವಿನ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ರೋಟರಿ ಜಿಲ್ಲಾ ಚೇಯರ್ ಮನ್ ವಿಕ್ರಮ್ದತ್ತ ಮಾತನಾಡಿ ರೋಟರಿ ಸಂಸ್ಥೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ರೋಟರಿ ಕ್ಲಬ್ಗಳು ಶಾಲೆಗಳನ್ನು ಕೇಂದ್ರೀಕರಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಅಭಿನಂದನೀಯ ಎಂದರು.
ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಅಧ್ಯಕ್ಷ ರಾಘವೇಂದ್ರ ಭಟ್ ಮಾತನಾಡಿ ಶಿಕ್ಷಕ ಕೇವಲ ಜ್ಞಾನ ನೀಡುವುದು ಮಾತ್ರವಲ್ಲದೆ ವ್ಯಕ್ತಿಯನ್ನು ಶಕ್ತಿಯನ್ನಾಗಿ ರೂಪಿಸುತ್ತಾನೆ ಎಂದು ತಿಳಿಸಿದರು.
ಈ ಸಂದರ್ಭ ಪ್ರಶಸ್ತಿ ವಿಜೇತ ಶಿಕ್ಷಕರಾದ ಮುರಳಿಕೃಷ್ಣ ರಾವ್, ಸುನೀಲ್ ಸಿಕ್ವೇರಾ, ಎಡ್ರಿನ್ ಡಿಸೋಜಾ ಅವರನ್ನು ಅಭಿನಂದಿಸಲಾಯಿತು.
ಜಿಲ್ಲಾ ನಿಯೋಜಿತ ಗವರ್ನರ್ ಪ್ರಕಾಶ್ ಕಾರಂತ್ ಭೇಟಿ ನೀಡಿದರು, ಸಹಾಯಕ ಗವರ್ನರ್ ಸುರೇಂದ್ರ ಕಿಣಿ, ವಲಯ ಲೆಫ್ಟಿನೆಂಟ್ ಅವಿಲ್ ಮಿನೇಜಸ್, ರೋಟರಿ ಕ್ಲಬ್ ಬಿ.ಸಿ.ರೋಡು ಸಿಟಿಯ ಅಧ್ಯಕ್ಷ ಸತೀಶ್ ಕೆ., ಕಾರ್ಯದರ್ಶಿ ಪಲ್ಲವಿ ಕಾರಂತ್, ರೋಟರಿ ಕ್ಲಬ್ ಮೊಡಂಕಾಪು ಅಧ್ಯಕ್ಷ ಎಲಿಯಸ್ ಸ್ಯಾಂಕಿಸ್ಟ್, ಕಾರ್ಯದರ್ಶಿ ಪಿ.ಎ. ರಹೀಂ, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಅಧ್ಯಕ್ಷ ಮೈಕಲ್ ಡಿಕೋಸ್ತ, ಕಾರ್ಯದರ್ಶಿ ರಾಜೇಶ್ ನೆಲ್ಯಾಡಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಕಾರ್ಯದರ್ಶಿ ರಮೇಶ್ ನಾಯಕ್ ವಂದಿಸಿದರು. ಸದಸ್ಯ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಶೃತಿ ಮಾಡ್ತ ಸಹಕರಿಸಿದರು. ರೋಟರಿ ಕ್ಲಬ್ ಮೂಲಕ ಉಚಿತವಾಗಿ ನೀಡುವ ವಿದ್ಯಾರ್ಥಿಗಳ ಶಿಕ್ಷಣ ಮಾರ್ಗದರ್ಶಿ ವಿದ್ಯಾಸೇತು, ಜಿಲ್ಲಾ ಸಮ್ಮೆಳನ ಸದಸ್ಯತ್ವ ಅರ್ಜಿಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.