ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ 2022-23ನೇ ಸಾಲಿನ ಅಧ್ಯಕ್ಷರಾಗಿ ಚಿತ್ತರಂಜನ್ ಶೆಟ್ಟಿ ಬೊಂಡಾಲ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಬಿ.ಸಿ ರೋಡಿನ ಬಿ. ಎ. ಸೋಮಯಾಜಿ ರೋಟರಿ ಸಭಾಂಗಣದಲ್ಲಿ ಕ್ಲಬ್ ಅಧ್ಯಕ್ಷ ಶನ್ಫತ್ ಶರೀಫ್ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಇದೇ ವೇಳೆ 2023-24ರ ಸಾಲಿನ ಅಧ್ಯಕ್ಷರಾಗಿ ಸುರೇಶ್ ಸಾಲಿಯಾನ್, ಮುಂದಿನ ಆನ್ಸ್ ಕ್ಲಬ್ ಅಧ್ಯಕ್ಷೆಯಾಗಿ ವಿದ್ಯಾ ಉಮೇಶ್ಮೂಲ್ಯ ಆಯ್ಕೆಯಾದರು.