ಬಂಟ್ವಾಳ: ಸೆಲ್ಕೊ ಸೋಲಾರ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಸೆಲ್ಕೋ ಸೇವಾ ಸಪ್ತಾಹದ ಅಂಗವಾಗಿ ಸೆಲ್ಕೋ ಸೇವಾ ಶಿಬಿರ ಶುಕ್ರವಾರ ಕಟೀಲಿನಲ್ಲಿ ನಡೆಯಿತು.
ಕರ್ನಾಟಕ ವಿಕಾಸ ಬ್ಯಾಂಕಿನ ವ್ಯವಸ್ಥಾಪಕ ದಿನೇಶ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಸೌರಶಕ್ತಿ ಉತ್ಪಾದನೆಯಲ್ಲಿ ಇತರ ಕಂಪೆನಿಗಳಿಂಗಿಂತ ಸೆಲ್ಕೋ ಸಂಸ್ಥೆ ವಿಭಿನ್ನವಾಗಿ ಹಾಗೂ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಸೆಲ್ಕೋ ಉಡುಪಿ ವಿಭಾಗದ ವ್ಯವಸ್ಥಾಪಕ ಸುರೇಶ್ ನಾಯ್ಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸೆಲ್ಕೋ ಕೇವಲ ತನ್ನ ಉತ್ಪನ್ನಗಳ ಮಾರಾಟ ಮಾಡದೆ ಸೇವೆಯತ್ತವೂ ಹೆಚ್ಚಿನ ಗಮನ ನೀಡುತ್ತಿದೆ ಎಂದರು.
ಸಿಎಸ್ಡಿ ವಿಭಾಗದ ಭವ್ಯ, ಎಸ್ಕೆಡಿಆರ್ಡಿಪಿ ಕಿನ್ನಿಗೋಳಿ ವಲಯದ ಮೇಲ್ವಿಚಾರಕ ನವೀನ್, ಸೆಲ್ಕೋ ಗ್ರಾಹಕ ಅರುಣ್ ಸುವರ್ಣ ಉಪಸ್ಥಿತರಿದ್ದರು. ಸೆಲ್ಕೋ ಸಿಬ್ಬಂದಿ ವಿನೋದ್ ಸ್ವಾಗತಿಸಿದರು, ಜಗದೀಶ್ ವಂದಿಸಿದರು, ಸೆಲ್ಕೋ ಸೋಲಾರ್ ಮಂಗಳೂರು ಶಾಖೆ ವ್ಯವಸ್ಥಾಪಕ ರವೀಣ ಬಂಗೇರ ಕಾರ್ಯಕ್ರಮ ನಿರೂಪಿಸಿದರು.