ಬಂಟ್ವಾಳ: ಇಚ್ಚಾಶಕ್ತಿ ಇದ್ದಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯವಿದೆ ಎಂದು ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಹೇಳಿದರು.
ಬಿ.ಸಿ.ರೋಡು ಕೈಕಂಬ ಯುನೈಟೆಡ್ ಟಿವಿಎಸ್ ಶೋ ರೂಂ ಮುಂಭಾಗ ನಡೆದ ಜೆಸಿಐ ಬಂಟ್ವಾಳದ ಜೆಸಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜೆಸಿ ಸಂಸ್ಥೆ ಸಮಾಜ ಸೇವೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದೆ. ಕೋವಿಡ್ ಸಂದರ್ಭ ಗೃಹರಕ್ಷಕದಳದ ಸಿಬ್ಬಂದಿಗಳು ಉತ್ತಮ ಕಾರ್ಯ ನಿರ್ವಹಿಸಿದ್ದು ಅವರನ್ನು ಈ ಸಂದರ್ಭ ಗೌರವಿಸಿದ ಜೆಸಿಐ ಬಂಟ್ವಾಳದ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಕೋವಿಡ್ ಸಮಯದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಜೇಸಿ ನಿಕಟಪೂರ್ವಾಧ್ಯಕ್ಷ ಸದಾನಂದ ಬಂಗೇರ ಅವರಿಗೆ ಕಮಲಪತ್ರ, ಪೂರ್ವಾಧ್ಯಕ್ಷ ಸುರೇಶ್ ಕುಮಾರ್ ನಾವೂರು ಅವರಿಗೆ ಮೇಜರ್ ಡೋನರ್, ಸಂದೀಪ್ ಸಾಲ್ಯಾನ್ ಅವರಿಗೆ ಅತ್ಯುತಮ ಲೋಮ್ ಪ್ರೋಜೆಕ್ಟ್ ,ಸದಸ್ಯರಾದ ಅಕ್ಷಯ್ ಹಾಗೂ ರಶ್ಮಿ ಶೆಟ್ಟಿ ಅವರಿಗೆ ಯುವ ಜೇಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಮೇಶ್ ಆರ್. ಮೂಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ವಿಭಾಗದ ವಲಯ ಸಯೋಜಕ ಜಬ್ಬಾರ್, ವಲಯ ಸಹ ಸಂಯೋಜಕ ಯತೀಶ್ ಕರ್ಕೆರಾ, ನಿಕಟಪೂರ್ವಾಧ್ಯಕ್ಷ ಸದಾನಂದ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರೋಷನ್ ರೈ ವಂದಿಸಿದರು. ಕೋಶಾಧಿಕಾರಿ ರವೀಣ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಜೇಸಿರೆಟ್ ಅಧ್ಯಕ್ಷೆ ವಿದ್ಯಾ ಉಮೇಶ್, ಸ್ಥಾಪಕಾಧ್ಯಕ್ಷ ನಾಗೇಶ್ ಬಾಳೆಹಿತ್ಲು, ಪೂರ್ವಾಧ್ಯಕ್ಷರಾದ ಲೋಕೇಶ್ ಸುವರ್ಣ, ಸಂತೋಷ್ ಜೈನ್, ಬಾಲಕೃಷ್ಣ ಅಗ್ರಬೈಲು ,ದಯಾನಂದ ರೈ, ಸದಸ್ಯರಾದ ವೆಂಕಟೇಶ್ ಕೃಷ್ಣಾಪುರ, ಶ್ರೀನಿವಾಸ ಅರ್ಬಿ, ಕಿಶೋರ್ ಆಚಾರ್ಯ, ವಚನ್ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ನಾರಾಯಣ ಸಿ. ಪೆರ್ನೆ ಸಹಕರಿಸಿದರು. ಜೆಸಿಲೆಟ್ ಸದಸ್ಯರಿಂದ ನೃತ್ಯ, ಹಾಡು ಹಾಗೂ ಖ್ಯಾತ ರಂಗ ಕಲಾವಿದರಿಂದ ಕುಸಾಲ್ದ ಗತ್ತ್ ಮನೋರಂಜನಾ ಕಾರ್ಯಕ್ರಮ ನಡೆಯಿತು.