ಬಂಟ್ವಾಳ: ಓಂಕಾರೇಶ್ವರಿ ಭಜನಾ ಮಂದಿರ ದುರ್ಗಾನಗರ ಕುರಿಯಾಳ ಇದರ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಮಂಜೂರಾದ ಎರಡು ಲಕ್ಷ ರೂಪಾಯಿ ಅನುದಾನದ ಮಂಜೂರಾತಿ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಅವರು ಭಜನಾ ಮಂದಿರದ ಜಿರ್ನೋದರ ಸಮಿತಿಯ ಅಧ್ಯಕ್ಷ ವಸಂತ ಕುಮಾರ್ ಮಣಿಹಳ್ಳ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಮುದಾಯ ವಿಭಾಗದ ತಾಂತ್ರಿಕ ಯೋಜನಾಧಿಕಾರಿಗಳಾದ ಪುಷ್ಪರಾಜ್, ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ. ಹಾಗೂ ಕುರಿಯಾಳ ಒಕ್ಕೂಟ ಹಾಗೂ ಬಿ.ಸಿ.ರೋಡ್ ವಲಯದ ಅಧ್ಯಕ್ಷ ಶೇಖರ ಸಾಮಾನಿ, ಪ್ರಮುಖರಾದ ಧರ್ಮಣ, ಶ್ರೀನಿಧಿ ಬಂಗೇರ, ರಾಜೀವಿ ದುರ್ಗಾನಗರ, ನಾಗೇಶ್ ಕೆ., ಹೊನ್ನಪ್ಪ ಜಗದೀಶ್ ಪಾಪುದಡ್ಕ, ಮತ್ತಿತರರು ಉಪಸ್ಥಿತರಿದ್ದರು.