ಬಂಟ್ವಾಳ: ರೋಟರಿ ಕ್ಲಬ್ ಬಿಸಿರೋಡ್ ಸಿಟಿ ಇದರ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರ ಉಪ್ಪಿನಂಗಡಿ ಇದರ ನೇತ್ರಾಧಿಕಾರಿ ಎಸ್. ಶಾಂತರಾಜ್ ಇವರ ಸಹಭಾಗಿತ್ವದಲ್ಲಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಣ್ಣಿನ ನೂನ್ಯತೆ ಇರುವಂತಹ 25 ಆಶಾ ಕಾರ್ಯಕರ್ತೆಯರಿಗೆ ಹಾಗು ಕರೊನ ವಾರಿಯರ್ಸ್ಗಳಿಗೆ ಕಣ್ಣಿನ ತಪಾಸಣೆ ಹಾಗು 50 ಸಾವಿರ ರೂಪಾಯಿ ಮೌಲ್ಯದ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಯಿತು.
ಇದೇ ಸಂದರ್ಭ ಕೋವಿಡ್ ಮುಂಜಾಗ್ರತೆ ಬಗ್ಗೆ ಮಾಹಿತಿ ನೀಡಲಾಯಿತು. ಸಸಿವಿತರಣೆ ಮಾಡುವ ಮೂಲಕ ಪರಿಸರ ಜಾಗೃ ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿಶಿರ, ಪದ್ಮನಾಭ ರೈ, ಅಧ್ಯಕ್ಷ ಸತೀಶ್ ಕುಮಾರ್, ಕಾರ್ಯದರ್ಶಿ, ಪಲ್ಲವಿ ಕಾರಂತ್, ಸದಸ್ಯರಾದ ಪ್ರಶಾಂತ್ ಕಾರಂತ್, ಗಣೇಶ್ ಶೆಟ್ಟಿ, ಸುಂದರ್ ಬಂಗೇರ ಉಪಸ್ಥಿತರಿದ್ದರು.