ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ದ.ಕ. ಜಿಲ್ಲೆ ಇವರ ಸಹಯೋಗದೊಂದಿಗೆ 115ನೇ ರಕ್ತದಾನ ಶಿಬಿರ ಸೆ. 5ರಂದು ಆದಿತ್ಯವಾರ ಬೆಳಿಗ್ಗೆ 9 ರಿಂದ ಮ್ಯಾಹ್ನ 1 ಗಂಟೆಯವರೆಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಲಿದೆ.
ಇಂಡಿಯನ್ ರೆಡ್ಕ್ರಾಸ್ ಸೋಸೈಟಿಯ ಗೌರವ ಕಾರ್ಯದರ್ಶಿ ಎಸ್.ಎ. ಪ್ರಭಾಕರ ಶರ್ಮ ಶಿಬಿರ ಉದ್ಘಾಟಿಸುವರು, ಅತಿಥಿಗಳಾಗಿ ರೋಟರಿ ಕ್ಲಬ್ನ ನಿಯೋಜಿತ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್, ಉದ್ಯಮಿ ಬಿ. ಸಂಜೀವ ಪೂಜಾರಿ ಭಾಗವಹಿಸುವರು ಎಂದು ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.