ಬಂಟ್ವಾಳ: ಬಜಾರ್ ಸಮೂಹ ಸಂಸ್ಥೆ ವತಿಯಿಂದ ಕೈಕುಂಜೆಯ ಜಿಬಿಎಚ್ಪಿ ಒಳಾಂಗಣ ಕ್ರೀಡಾಂಗಣದ ಸದಸ್ಯರಿಗೆ ಜೆರ್ಸಿ ವಿತರಿಸಲಾಯಿತು.
ಬಜಾರ್ ಸಂಸ್ಥೆಯ ಆಡಳಿತವ ಪಾಲುದಾರ ಸುಧಾಕರ್ ಆಚಾರ್ ಜೆರ್ಸಿ ಅನಾವರಣಗೊಳಿಸಿ ಮಾತನಾಡಿ ಬಜಾರ್ ಸಮೂಹ ಸಂಸ್ಥೆಯು ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ, ಶಟಲ್ ಬ್ಯಾಟ್ಮಿಂಟನ್ ನನ್ನ ಅತ್ಯಂತ ಪ್ರೀತಿಯ ಆಟವಾಗಿರುವುದರಿಂದ ನನ್ನ ಜೊತೆ ಆಡುವ ಕ್ರೀಡಾಪಟುಗಳಿಗೆ ಜೆರ್ಸಿ ನೀಡಿರುವುದು ನನಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆಟಗಾರರಾದ ಬಂಟ್ವಾಳ ಲಯನ್ಸ್ ಕ್ಲಬ್ನ ನಿಕಟಪೂರ್ವ ಅಧ್ಯಕ್ಷ ಕೃಷ್ಣಶ್ಯಾಂ, ನಿಕಟಪೂರ್ವ ಕಾರ್ಯದರ್ಶಿ ವೈಕುಂಠ ಕುಡ್ವಾ , ಉಲ್ಲಾಸ್ ಸಂಸ್ಥೆಯ ಮಾಲಕ ಉದಯ ಪೈ , ಡಾ| ಜಯದೀಪ್ , ಅಟೋಲೈನ್ಸ್ ಸಂಸ್ಥೆಯ ಮಾಲಕ ಸುಧಾಕರ್ ಸಾಲ್ಯಾನ್, ಎಲೈಸಿಯ ಅಭಿವೃದ್ದಿ ಅಧಿಕಾರಿ ಡಿ.ಪಿ. ಭಟ್, ಅಶ್ವತ್, ಪ್ರಥಮ್, ನಾಗೇಂದ್ರ ಉಪಸ್ಥಿತರಿದ್ದರು. ಈ ಸಂದರ್ಭ ರಾಜ್ಯ ಮಟ್ಟದ ಆಟಗಾರ ಅಮೃತ್ ಹಾಗೂ ತಂಡದವರು ಶುಭವನ್ನು ಹಾರೈಸಿದರು.