ಬಂಟ್ವಾಳ: ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಡ್ಡಲಕಾಡು ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರೇರಣೆಯಂತೆ ದೇಶದ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಸರಕಾರಿ ಶಾಲೆ ಉಳಿಸಿ ಬೆಳೆಸುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ದಡ್ಡಲಕಾಡು ಸರಕಾರಿ ಶಾಲೆಯನ್ನು ದತ್ತು ಪಡೆದು ದೇಶದಲ್ಲಿಯೇ ಮಾದರಿ ಶಾಲೆಯಾಗಿ ರೂಪಿಸಲಾಗಿದೆ ಎಂದರು. ಕೋವಿಡ್ ಕಾರಣಕ್ಕಾಗಿ ಸ್ಥಗಿತಗೊಂಡಿರುವ ಶಾಲೆಗಳನ್ನು ಮತ್ತೆ ಪುನಾರಂಭಿಸಿ ಭೌತಿಕ ತರಗತಿಗಳನ್ನು ನಡೆಸುವಂತೆ ಕಾರ್ಡ್ ಅಭಿಯಾನದ ಮೂಲಕ ಸರಕಾರದ ಗಮನ ಸೆಳೆಯಲಾಗಿತ್ತು. ಇದೀಗ ಇಂದಿನಿಂದ 9 ಮತ್ತ 10 ನೇ ತರಗತಿಗಳು ಆರಂಭವಾಗಲಿದ್ದು ಮುಂದಿನ ದಿನಗಳಲ್ಲಿ ಒಂದನೇ ತರಗತಿಯಿಂದಲೇ ತರಗತಿಗಳು ಆರಂಭಗೊಳ್ಳವ ಬಗ್ಗೆ ಸರಕಾರ ಗಮನ ಹರಿಸಲಿ ಎಂದು ತಿಳಿಸಿದರು.
ಈ ಸಂದರ್ಭ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ನ ಸದಸ್ಯರಾದ ಪುರುಷೋತ್ತಮ ಅಂಚನ್, ರಾಮಚಂದ್ರ ಪೂಜಾರಿ ಕರೆಂಕಿ, ಪೂವಪ್ಪ ಮೆಂಡನ್, ಶೇಖರ್ ಅಂಚನ್, ನವೀನ ಸೇಸಗುರಿ, ಬಾಲಕೃಷ್ಣ ಜಿ., ಕರುಣಾಕರ ಕುಲಾಲ್, ಉದಯ ಕರೆಂಕಿ, ಪ್ರವೀಣ್, ರಾಕೇಶ್ ಉಪಸ್ಥಿತರಿದ್ದರು.