ಬಂಟ್ವಾಳ: ರೋಟರಿ ಕ್ಲಬ್ ಬಿ.ಸಿ.ರೋಡು ಸಿಟಿಯ ವತಿಯಿಂದ ಶನಿವಾರ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯ ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಬಂಟ್ವಾಳ ಪುರಸಭೆಯ ಪೌರಕಾರ್ಮಿಕರಿಗೆ ರೈನ್ ಕೋಟ್ ವಿತರಿಸಲಾಯಿತು. ಅಲ್ಲದೆ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಬಿ.ಸಿ.ರೋಡಿನ ಸೃಜನಶೀಲ ಛಾಯಾಗ್ರಾಹಕ ರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ಅಧ್ಯಕ್ಷ ಸತೀಶ್ ಕುಮಾರ್, ಪದ್ಮನಾಭ ರೈ, ಉಪಾಧ್ಯಕ್ಷ ಜಗನ್ನಾಥ ಚೌಟ, ಕಾರ್ಯದರ್ಶಿ ಪಲ್ಲವಿ ಕಾರಂತ್, ಸದಸ್ಯರಾದ ಸುಧೀರ್ ಶೆಟ್ಟಿ, ಚಂದ್ರಶೇಖರ್ ಪೂಜಾರಿ ಕೋರ್ಯ, ಉಮೇಶ್ ನೆಲ್ಲಿಗುಡ್ಡೆ, ರಮೇಶ್ ನೆಟ್ಲ, ಸುಪ್ರಿಯಾ ರಮೇಶ್, ಸದಾಶಿವ ಬೊಂಡಾಲ, ದಿವಾಕರ ಶೆಟ್ಟಿ, ಅಲ್ಬರ್ಟ್ ಡಿಸೋಜಾ ಉಪಸ್ಥಿತರಿದ್ದರು.