ಬಂಟ್ವಾಳ: ಜೆಸಿಐ ಬಂಟ್ವಾಳ ಈ ವರ್ಷದ ವಿಶೇಷ ಯೋಜನೆಗಾಗಿ ವಿನ್ನರ್ ಪ್ರಶಸ್ತಿ ಮತ್ತು ವಲಯದ ಅತ್ಯುತ್ತಮ ಘಟಕ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದೆ. ಇತ್ತೀಚೆಗೆ ಮಂಗಳೂರಿನ ಕುಲಶೇಖರದ ಕೋರ್ಡೆಲ್ ಸಭಾಂಗಣದಲ್ಲಿ ನಡೆದ ಜೆಸಿಐ ವಲಯ ೧೫ರ ಮಧ್ಯಂತರ ಸಮ್ಮೇಳನದಲ್ಲಿ ಜೆಸಿಐ ಬಂಟ್ವಾಳದ ಅಧ್ಯಕ್ಷ ಉಮೇಶ್ ಆರ್. ಮೂಲ್ಯ ಪ್ರಶಸ್ತಿ ಸ್ವೀಕರಿಸಿದರು. ಬಡ ಕುಟುಂಬದ ಮನೆಗಳ ಛಾವಣಿ ದುರಸ್ತಿ, ಕರೋನಾ ಜಾಗೃತಿಗಾಗಿ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ, ಭತ್ತದ ಸಾಗುವಾಳಿ, ರಕ್ತದಾನ ಶಿಬಿರ, ನಾಗಮಜ್ಜಿ ಮನೆ ನಿರ್ಮಾಣದ ನೇತೃತ್ವ ಮೊದಲಾದ ಹಲವಾರು ಕಾರ್ಯಗಳನ್ನು ಘಟಕ ಹಮ್ಮಿಕೊಂಡು ಈ ಪ್ರಶಸ್ತಿಗೆ ಪಾತ್ರವಾಗಿದೆ.
ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಪ್ರಶಸ್ತಿ ವಿತರಿಸಿದರು. ನಿಕಟಪೂರ್ವ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ವಲಯ ಉಪಾಧಕ್ಷ ಶರತ್ ಕುಮಾರ್, ವಲಯ ನಿರ್ದೇಶಕ ಲೋಕೇಶ್ ರೈ, ಜೆಸಿಐ ಬಂಟ್ವಾಳದ ಸ್ಥಾಪಾಕಾಧ್ಯಕ್ಷ ನಾಗೇಶ್ ಬಾಳೆಹಿತ್ಲು, ವಲಯಾಧಿಕಾರಿ ಯತೀಶ್ ಕರ್ಕೇರಾ, ಸದಸ್ಯ ಮನೋಜ್ ಕನಪಾಡಿ ಉಪಸ್ಥಿತರಿದ್ದರು.