ಬಂಟ್ವಾಳ: ಇಲ್ಲಿನ ಪೇಟೆಯ ನಂದನಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನಕ್ಕೆ ಸಮರ್ಪಣೆಯಾಗಲಿರುವ ಶ್ರೀ ವೈದ್ಯನಾಥ ದೈವದ ಪಾಪೆಬಂಡಿಯ ವೈಭವ ಶೋಭಾಯಾತ್ರೆಯು ಶನಿವಾರ ಸಂಜೆ ವಿಜ್ರಂಭಣೆಯಿಂದ ನಡೆಯಿತು.
ಪೊಳಲಿ ದ್ವಾರದ ಬಳಿ ಪಾಪೆ ಬಂಡಿಗೆ ಆರತಿ ಬೆಳಗಿ ಬಳಿಕ ಕಣಿಯೂರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಶೋಭಾಯಾತ್ರೆಗೆ ತೆಂಗಿಯ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಚೆಂಡೆವಾದನ, ಗೊಂಬೆ ಕುಣಿತ, ನಾದಸ್ವರ, ತಾಸೆ ಬ್ಯಾಂಡ್ಗಳ ಹಿಮ್ಮೇಳ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಈ ಸಂದರ್ಭ ಸಮಿತಿಯ ಗೌರವಾಧ್ಯಕ್ಷ ಸೇಸಪ್ಪ ಕೋಟ್ಯಾನ್, ಅಧ್ಯಕ್ಷ ಗಣೇಶ್ ಸುವರ್ಣ, ಕಾರ್ಯದರ್ಶಿ ಪ್ರಕಾಶ್ ಅಂಚನ್, ಕೋಶಾಧಿಕಾರಿ ಲೋಕೇಶ್ ಬಂಗೇರ, ಸುಧೀರ್ ಬಾಳಿಗಾ, ಶಾಸಕ ರಾಜೇಶ್ ನಾಕ್, ಮಾಝಿ ಸಚಿವ ಬಿ.ರಮಾನಾಥ ರೈ, ಜಿ.ಪಂ.ಸದಸ್ಯ ಪದ್ಮಶೇಖರ ಜೈನ್, ಪ್ರಮುಖರಾದ ಜಿ.ಆನಂದ ಹರಿಕೃಷ್ಣ ಬಂಟ್ವಾಳ್, ಬೇಬಿ ಕುಂದರ್, ವಿಶ್ವನಾಥ ಗಣೇಶ್ ಟಯರ್, ಸತೀಶ್ ಕುಮಾರ್, ಸುಧಾಕರ ಸಾಲ್ಯಾನ್, ಭುವನೇಶ್ ಪಚ್ಚಿನಡ್ಕ, ಪುರುಷ ಸಾಲ್ಯಾನ್ ನೆತ್ತರಕೆರೆ, ರಾಮದಾಸ ಬಂಟ್ವಾಳ, ಸುರೇಶ್ ಕುಲಾಲ್, ಪುರುಷೋತ್ತಮ ಅಂಚನ್, ನಾಗೇಶ್ ಸಾಲ್ಯಾನ್ ಹಾಗೂ ಮನೆತನದವರು ಹಾಜರಿದ್ದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ರಾಷ್ಟ್ರೀಯ ಹೆದ್ದಾರಿಯ ಮೂಲಕ ಆಗಮಿಸಿದ ಶೋಭಾಯಾತ್ರೆಯು ಬಂಟ್ವಾಳ ಬೈಪಾಸ್ನಿಂದ ಪೂರ್ಣಕುಂಭ ಹಾಗೂ ಭಜನಾ ಸಂಕೀರ್ತನೆಯ ಮೂಲಕ ಪೇಟೆ ರಸ್ತೆಯಾಗಿ ಕ್ಷೇತ್ರ ತಲುಪಿತು.