ಬಂಟ್ವಾಳ: ಕಲ್ಲಡ್ಕ ಹಾಗೂ ಬಿ.ಸಿ.ರೋಡಿ ತಲಪಾಡಿಯಲ್ಲಿ ಶಾಖೆ ಹೊಂದಿರುವ ಬಂಟ್ವಾಳ ತಾಲೂಕಿನ ಪ್ರತಿಷ್ಠಿತ ಎಲೆಕ್ಟ್ರೋನಿಕ್ಸ್ ಮಳಿಗೆ ಸಂಭ್ರಮ ಎಲೆಕ್ಟ್ರಾನಿಕ್ಸ್ ಸ್ಥಾಪನೆಗೊಂಡು ಯಶಸ್ವಿ ಹತ್ತನೇ ವರ್ಷವನ್ನು ಪೂರೈಸಿದೆ.
ಸಂಸ್ಥೆಯ ದಶ ಸಂಭ್ರಮದ ಹಿನ್ನಲೆಯಲ್ಲಿ ವಿಶೇಷ ಮಾರಾಟವನ್ನು ಹಮ್ಮಿಕೊಂಡಿದ್ದು ಆ.2ರಿಂದ ಆ.8ರವರೆಗೆ ನಡೆಯಲಿದೆ. ಆ.2 ರಂದು ಎರಡು ಶಾಖೆಗಳಲ್ಲಿಯೂ ದಶ ಸಂಭ್ರಮದ ವಿಶೇಷ ಮಾರಾಟಕ್ಕೆ ಚಾಲನೆ ನೀಡಿಲಾಗಿದ್ದು ಕಲ್ಲಡ್ಕದ ಪ್ರಧಾನ ಕಚೇರಿಯಲ್ಲಿ ಉದ್ಯಮಿ ಜಯಾನಂದ ಆಚಾರ್ಯ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.
ಈ ಸಂದರ್ಭ ಚೈತನ್ಯ ಸಂಕೀರ್ಣದ ಮಾಲಕ ತಿರುಮಲೇಶ್ ಭಟ್, ಬ್ಯಾಂಕ್ ಆಫ್ ಬರೋಡಾ ಕಲ್ಲಡ್ಕ ಶಾಖೆಯ ಪ್ರಬಂಧಕ ಸದಾಶಿವ ಆಚಾರ್ಯ, ಬ್ಯಾಂಕ್ ಅಧಿಕಾರಿ ಧನಂಜಯ, ಗೋಳ್ತಮಜಲು ಗ್ರಾ.ಪಂ. ಅಧ್ಯಕ್ಷ ಅಭಿಷೇಕ್ ಶೆಟ್ಟಿ, ಸಂಭ್ರಮ ಎಲೆಕ್ಟ್ರಾನಿಕ್ಸ್ನ್ ಮಾಲಕ ಗಿರೀಶ್ ನಿಟಿಲಾಪುರ ಉಪಸ್ಥಿತರಿದ್ದರು.
ಬಿ.ಸಿ.ರೋಡಿನ ತಲಪಾಡಿ ಶಾಖೆಯಲ್ಲಿ ನಡೆದ ಸಮಾರಂಭವನ್ನು ಕಟ್ಟಡದ ಮಾಲಕ ಎ.ಬಿ. ಶೆಟ್ಟಿ ದೀಪ ಬೆಳಗಿ ಉದ್ಘಾಟಿಸಿದರು. ಈ ಸಂದರ್ಭ ಲಿವಾ ಅಗರ್ಬತ್ತಿ ವಿತರಕ ಪದ್ಮನಾಭ ಬಡಕಬೈಲು, ಸಂಭ್ರಮ ಎಲೆಕ್ಟ್ರಾನಿಕ್ಸ್ನ ಹಿರಿಯ ವ್ಯವಸ್ಥಾಪಕ ಯೋಗೀಶ್ , ತಲಪಾಡಿ ಶಾಖಾ ಕಚೇರಿ ವ್ಯವಸ್ಥಾಪಕ ಪ್ರಸಾದ್ ಉಪಸ್ಥಿತರಿದ್ದರು.
ಆ. 2ರಿಂದ ಆ. 8ರವರೆಗೆ ಸಂಸ್ಥೆ ಸ್ಥಾಪನೆಯ ದಶಸಂಭ್ರಮದ ಅಂಗವಾಗಿ ವಿಶೇಷ ದರ ಕಡಿತದ ಮಾರಾಟ ನಡೆಯಲಿದ್ದು ಗಾಹಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.