ಬಂಟ್ವಾಳ: ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯಲ್ಲಿ ಜೆಸಿಐ ಬಂಟ್ವಾಳ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಹಕಾರದೊಂದಿಗೆ ನಿರ್ಮಾಣಗೊಳ್ಳುತ್ತಿರುವ ನಾಗಮಜ್ಜಿಯ ಮನೆ ನಿರ್ಮಾಣ ಕಾರ್ಯಕ್ಕೆ ಸಹಕಾರಿ ಸೊಸೈಟಿಗಳಿಗೆ ಸಾಫ್ಟ್ವೇರ್ ಅಳವಡಿಸುವ ಸಂಸ್ಥೆಯಾದ ಮಂಗಳೂರಿನ ಅಟೊಮೇಷನ್ ಕ್ಲೌಡ್ ಸೊಲ್ಯುಷನ್ಸ್ ಪ್ರೈ. ಲಿ. 25 ಸಾವಿರ ರೂಪಾಯಿಯ ಆರ್ಥಿಕ ನೆರವು ನೀಡಿದೆ.
ಬುಧವಾರ ಬೆಳಿಗ್ಗೆ ಜಾಋಂದಗುಡ್ಡೆಗೆ ಭೇಟಿ ನೀಡಿ ಮನೆ ನಿರ್ಮಾಣ ಕಾರ್ಯವನ್ನು ಪರಿಶೀಲಿಸಿದ ಸಂಸ್ಥೆಯ ಅಧ್ಯಕ್ಷ ಲೋಕೇಶ್ ಎನ್. ಆರ್ಥಿಕ ನೆರವಿನ ಚೆಕ್ಕನ್ನು ನಾಗಮಜ್ಜಿಗೆ ಹಸ್ತಾಂತರಿಸಿದರು. ಈ ಸಂದರ್ಭ ಸಂಸ್ಥೆಯ ಆಡಳಿತ ನಿರ್ದೇಶಕ ಜಗದೀಶ್ ರಾಮ, ಸೌಹರ್ದ ಫೆಡರಲ್ ಅಧಿಕಾರಿ ಗುರುಪ್ರಸಾದ್ ಬಂಗೇರ ಉಪಸ್ಥಿತರಿದ್ದರು.