ಬಂಟ್ವಾಳ: ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಯುವವೇದಿಕೆಯ ವತಿಯಿಂದ ಬಿ.ಸಿ.ರೋಡ್ ಕೈಕುಂಜೆ ರುದ್ರಭೂಮಿ ಪರಿಸರದಲ್ಲಿ ವನಮಹೋತ್ಸವ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ್ ಅವರ ನೇತೃತ್ವದಲ್ಲಿ ಯುವ ವೇದಿಕೆಯ ಸದಸ್ಯರು ತಾವೇ ಸ್ವತಃ ಮನೆಯಿಂದ ತಂದ ಗಿಡಗಳನ್ನು ನಾಟಿ ಮಾಡಿದರು. ಪರಿಸರ ರಕ್ಷಣೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಆಹಾರದ ಉದ್ದೇಶಕ್ಕಾಗಿ ಹಣ್ಣಿನ ಗಿಡಗಳಾದ ನೇರಳೆ, ಪೇರಳೆ, ಮಾವು, ಹಲಸು, ಸೀತಾಫಲ ಇತ್ಯಾದಿ ಹಾಗೂ ಔಷಧಿಯ ಗಿಡಗಳಾದ ಬೇಂಗ, ಹಾಳೆ ಮರ, ಕಹಿಬೇವು, ವೀಳ್ಯದೆಲೆ ಗಿಡಗಳನ್ನು ನೆಡುವುದರೊಂದಿಗೆ ಗಿಡಗಳ ಒಂದು ವರ್ಷದ ಸರಂಕ್ಷಣೆ ಜವಾಬ್ದಾರಿಯನ್ನು ವಹಿಸಿಕೊಂಡರು. ಈ ಸಂದರ್ಭದಲ್ಲಿಯುವ ವೇದಿಕೆಯ ಮಾಜಿ ಅಧ್ಯಕ್ಷ ನಾರಾಯಣ ಸಿ ಪೆರ್ನೆ, ಕಾರ್ಯದರ್ಶಿ ಪುನಿತ್ ಮೈರಾನಪಾದೆ, ಕೋಶಾಧಿಕಾರಿ ಕವಿರಾಜ್ ಚಂದ್ರಿಗೆ, ಜಿಲ್ಲಾ ವಲಯ ಸಂಚಾಲಕ ಕಾರ್ತಿಕ್ ಮೈಯರಬೈಲು, ಜತೆ ಕಾರ್ಯದರ್ಶಿ ವಿತೇಶ್ ಕಾಮಾಜೆ, ಉಪಾಧ್ಯಕ್ಷ ಹರಿಪ್ರಸಾದ್ ಭಂಡಾರಿಬೆಟ್ಟು, ಸದಸ್ಯರಾದ ಕಿಶೋರ್ ಬಂಗೇರ, ನಿತೇಶ್ ಪಲ್ಲಿಕಂಡ, ಮೋಹನ್ ಮಡ್ಯಾರ್, ರಾಮ, ಡಾ. ಬಾಲಕೃಷ್ಣ ಅಗ್ರಬೈಲು, ಸುರೇಶ್ ಬೋರುಗುಡ್ಡೆ, ನಿಶಾಂತ್ ಬಂಟ್ವಾಳ್, ಗೌರವ ಸಲಹೆಗಾರರಾದ ಶೇಷಪ್ಪ ಮಾಸ್ಟರ್, ಸುರೇಶ್ ಸಾಲಿಯಾನ್, ನಾರಾಯಣ್ ಹೊಸ್ಮರ್, ವಿಠ್ಠಲ್ ಪಲ್ಲಿಕಂಡ, ನಾಗೇಶ್ ಟೈಲರ್, ಸುಧಾಕರ್ ಸಾಲಿಯಾನ್, ಗಣೇಶ್ ಕಾಮಾಜೆ, ಲಕ್ಷ್ಮಣ್ ಅಗ್ರಬೈಲು, ನಾಗೇಶ್ ಬಾಳೆಹಿತ್ಲು ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೇಶವ ದೈಪಲ ಸ್ಮಶಾನ ಸುಮಿತಿಯ ಉಸ್ತುವಾರಿ ಸದಸ್ಯ ಪದ್ಮನಾಭ ಸಹಕರಿಸಿದರು.