ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ವತಿಯಿಂದ ಸೇವಾಂಜಲಿ ಸಭಾಂಗಣದಲ್ಲಿ ಪ್ರತೀ ಮಂಗಳವಾರ ನಡೆಯುತ್ತಿದ್ದ ಉಚಿತ ಕಣ್ಣಿನ ತಪಾಸಣ ಶಿಬಿರ ಜು.6ರಿಂದ ಪುನಾರಂಭಗೊಳ್ಳಲಿದೆ.
ಕೊವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಶಿಬಿರವನ್ನು ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಪುನಾರಂಭಿಸಲಾಗಿದೆ. ಜು. 6 ರಿಂದ ಪ್ರತಿ ಮಂಗಳವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕೋವಿಡ್ ನಿಯಮಾವಳಿಗನುಸಾರವಾಗಿ ಈ ಶಿಬಿರ ನಡೆಯಲಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ತಿಳಿಸಿದ್ದಾರೆ.