ಬಂಟ್ವಾಳ: ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ರಾಮನಗರ ಬಂಟವಾಳ, ಇದರ ಮಾಸಿಕ ಸಭೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಭಾನುವಾರ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯಿತು.
ಧನ್ರಾಜ್ ಅಜಕಲ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಹರ್ಷಿತ್ ಅಜಕಲ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಗಣೇಶ್ ಶೆಟ್ಟಿ ರಾಮನಗರ, ಉಪಾಧ್ಯಕ್ಷ ಸಂದೇಶ್ ಹೊಸ್ಮಾರು, ಕೋಶಾಧಿಕಾರಿ ಕೃತಿಕ್ ರಾಮನಗರ, ಸಲಹೆಗಾರ ಪ್ರಭಾಕರ್ ಅರ್ಬಿಗುಡ್ಡೆ, ಮಾಜಿ ಅಧ್ಯಕ್ಷ ಹರೀಶ್ ಅಜಕಲ, ವಿಜಯ್ ಕಲ್ಲಗುಡ್ಡೆ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಡೆಯಿತು. ನೂತನ ಅಧ್ಯಕ್ಷರಾಗಿ ಸಂದೇಶ ಹೊಸ್ಮಾರ್, ಉಪಾಧ್ಯಕ್ಷರಾಗಿ ಕೃತಿಕ್ ರಾಮನಗರ, ಧನುಶ್ ರಾಮನಗರ, ಕಾರ್ಯದರ್ಶಿಯಾಗಿ ಲತೀಶ್ ಬೈಪಾಸ್, ವರುಣ್ ಬೈಪಾಸ್, ಕೋಶಾಧಿಕಾರಿಯಾಗಿ ಚರಣ್ ಅರ್ಬಿಗುಡ್ಡೆ, ಧನ್ರಾಜ್ ನಿತ್ಯಾನಂದ ನಗರ, ಸಲಹೆಗಾರರಾಗಿ ಪ್ರಭಾಕರ್ ಆರ್ಬಿಗುಡ್ಡೆ, ಹರೀಶ್ ಅಜಕಲ, ವಿಜಯ ಕಲಗುಡ್ಡೆ, ಧನರಾಜ್ ಅಜಕಲ, ದಿನೇಶ್ ಅಜಕಲ, ಜೊತೆ ಕಾರ್ಯದರ್ಶಿ ಹರ್ಷಿತ್ ಅಜಕಲ, ಕೀರ್ತನ್ ಬೈಪಾಸ್, ಸೂರಜ್ ಹೊಸ್ಮಾರ್, ತಾಲಿಮು ಸಂಘಟಕರಾಗಿ ಅಮಿತ್ ಅಜಕಲ, ರಿತೇಶ್ ಅಜಕಲ, ಜಯಪ್ರಸಾದ್ ಕಲ್ಲಗುಡ್ಡೆ, ಮೋಕ್ಷಿತ್ ಅಜಕಲ, ಮಯೂರ್ ಕಲ್ಲಗುಡ್ಡೆ, ತಾಲೀಮು ಸಂಚಾಲಕರಾಗಿ ಚಿತ್ತರಂಜನ್ ಕಲ್ಲಗುಡ್ಡೆ, ಅಮೃತ್ ಬೈಪಾಸ್, ಅನುಷ್ ಅಜಕಲ, ರಂಜನ್ ರಾಮನಗರ, ದಿತೇಶ್ ಬಂಟ್ವಾಳ, ಧನರಾಜ್ ರಾಮನಗರ, ಲಕ್ಷ್ಮೀಶ ರಾಮನಗರ ಆಯ್ಕೆಯಾದರು.