ಬಂಟ್ವಾಳ: ಶ್ರೀ ರಾಮ ಭಜನಾ ಮಂದಿರ ಶಿವಾಜಿನಗರ. ಕಾಮಾಜೆ, ದೈಪಲ ಇದರ 11ನೇ ವರ್ಷದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಶ್ರೀರಾಮ ದೇವರ ಪ್ರಸನ್ನ ಪೂಜೆಯು ವೇದಮೂರ್ತಿ ಶ್ರೀ ರಾಜ ಗೋಪಾಲ ಆಚಾರ್ಯ ಇವರ ನೇತ್ರತ್ವ ದಲ್ಲಿ ನಡೆಯಿತು. ದಶಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಶ್ರೀ ಮೋಹನದಾಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ಇವರ ಶುಭ ಆಶೀರ್ವಾದದೊಂದಿಗೆ ದಶಮಾನೋತ್ಸವದ ಅಂಗವಾಗಿ ನಿರ್ಮಾಣ ಗೊಂಡ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯನ್ನು ಸ್ವರ್ಣೋದ್ಯಮಿ ನಾಗೇಂದ್ರ. ವಿ. ಬಾಳಿಗಾ ಲೋಕಾರ್ಪಣೆ ಗೊಳಿಸಿದರು. ನೂತನ ತೀರ್ಥ ಬಾವಿಯನ್ನು ಚಲನ ಚಿತ್ರ ನಿರ್ದೇಶಕ ಎನ್ನಾರ್. ಕೆ. ವಿಶ್ವನಾಥ್ ಉದ್ಘಾಟಿಸಿದರು. ಭಜನಾ ಮಂದಿರದ ಗೌರವ ಅಧ್ಯಕ್ಷ ನೇಮಿರಾಜ ಶೆಟ್ಟಿ ಕೊಡಂಗೆ, ಭಜನಾ ಮಂದಿರದ ಅಧ್ಯಕ್ಷ ಕೇಶವ ದೈಪಲ, ಕಟ್ಟಡ ನಿರ್ಮಾಣ ಸಮಿತಿಯ ಚಂದಪ್ಪ ಮೇಸ್ತ್ರಿ ರಾಜೀವಪಳಿಕೆ, ಗೌರವ ಸಲಹೆಗಾರರಾದ ನಾರಾಯಣ ಮಾಸ್ತರ್, ಮಾಧ್ಯಮ ಪ್ರತಿನಿಧಿ ಸುಕುಮಾರ್ ಬಂಟ್ವಾಳ್, ಭಜನಾ ಮಂದಿರದ ಸದಸ್ಯರು ಹಾಗು ಸೀತ ಮಾತ ಮಹಿಳಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.