ಬಂಟ್ವಾಳ: ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಬಳಿಯ ಜಾರಂದಗುಡ್ಡೆ ನಿವಾಸಿ ನಾಗಮಜ್ಜಿಯ ಹೊಸ ಮನೆ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ. ಬೆಳಿಗ್ಗೆ ದೇವತಾಕಾರ್ಯಗಳನ್ನು ನಡೆಸಿ ನೂತನ ಮನೆ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭ ಜೇಸಿಐ ಬಂಟ್ವಾಳದ ಅಧ್ಯಕ್ಷ ಉಮೇಶ್ ಆರ್. ಮೂಲ್ಯ, ನಿಕಟಪೂರ್ವ ಅಧ್ಯಕ್ಷ ಸದಾನಂದ ಬಂಗೇರ, ಕಾರ್ಯದರ್ಶಿ ರೋಷನ್ ರೈ, ಸ್ಥಳೀಯ ಪಂಚಾಯತಿ ಸದಸ್ಯ ಮನೋಜ್ ಪ್ರಮುಖರಾದ ಮನೋಜ್ ಕನಪಾಡಿ, ಮನೆಯ ಯಜಮಾನಿ ನಾಗಮ್ಮ ಪೂಜಾರ್ತಿ ಮೊದಲಾದವರು ಉಪಸ್ಥಿತರಿದ್ದರು.

ಕಳೆದ ಹಲವು ಸಮಯಗಳಿಂದ ಬೀಳುವ ಸ್ಥಿತಿಯಲ್ಲಿದ್ದ ಮನೆಯಲ್ಲಿ ನಾಗಮಜ್ಜಿ ಮತ್ತವರ ಕುಟುಂಬ ಆತಂಕದಲ್ಲಿ ಬದುಕುತ್ತಿತ್ತು. ಇವರ ದಯಾನೀಯ ಸ್ಥಿತಿಯನ್ನು ಕಂಡು ದಾನಿಗಳ ನೆರವಿನೊಂಂದಿಗೆ ಸಮಾನ ಮನಸ್ಕ ಸಂಘಟನೆಗಳು ಮನೆ ನಿರ್ಮಾಣದ ಕಾರ್ಯಕ್ಕೆ ಮುಂದಾಗಿದೆ. ಮನೆ ನಿರ್ಮಾಣ ಕೆಲಸಕ್ಕೆ ಆರ್ಥಿಕವಾಗಿ ಹಾಗೂ ವಸ್ತು ರೂಪದಲ್ಲಿ ನೆರವು ನೀಡುವ ಸಂಘಟನೆಗಳು ನಾಗಮ್ಮ ಪೂಜಾರ್ತಿ ಅವರ ಸೊಸೆ ಜಯಂತಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿದೆ. ಬ್ಯಾಂಕ್ ಆಪ್ ಬರೋಡ, ತುಂಬೆ ಶಾಖೆ, 83720100001712, ಐಎಫ್ಎಸ್ಸಿ ಕೋಡ್: BARB0VJTHUM, ಗೂಗಲ್ ಪೇ ಅಥವಾ ಪೋನ್ ಪೇ: 9535538870 ಹೆಚ್ಚಿನ ಮಾಹಿತಿಗಾಗಿ 9964213454 ನ್ನು ಸಂಪರ್ಕಿಸಬಹುದಾಗಿದೆ.