ಬಂಟ್ವಾಳ: ಲಾಕ್ಡೌನ್ ಆರಂಭಗೊಂಡ ಬಳಿಕ ಸಂಕಷ್ಟದಲ್ಲಿರುವ ಬಡಕುಟುಂಬಗಳಿಗೆ ಜೇಸಿ ಸದಸ್ಯರು ಹಾಗೂ ದಾನಿಗಳ ನೆರವು ಪಡೆದುಕೊಂಡು ಅಗತ್ಯ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಕಾರ್ಯವನ್ನು ಬಂಟ್ವಾಳ ಜೆಸಿಐ ಸಂಸ್ಥೆ ಮಾಡಿಕೊಂಡು ಬರುತ್ತಿದ್ದು, ಈಗಾಗಲೇ ಹಲವು ಕುಟುಂಬಗಳಿಗೆ ಆಹಾರದ ಕಿಟ್ ನೀಡಿದೆ. ಗುರುವಾರ ಉದ್ಯಮಿ ರೊ.ದೇಜಪ್ಪ ಪೂಜಾರಿ ಪೆರಾಜೆ ಹಾಗೂ ಜೇಸಿ ಸದಸ್ಯ ಪ್ರಕಾಶ್ ಅವರು ಕೊಡುಗೆಯಾಗಿ ನೀಡಿರುವ ಆಹಾರದ ಕಿಟ್ಗಳನ್ನು ಜೆಸಿಐ ಬಂಟ್ವಾಳದ ಮುಖಾಂತರ ವಿತರಿಸುವ ಕಾರ್ಯಕ್ರಮಕ್ಕೆ ಕೈಕಂಬದ ಟಿವಿಎಸ್ ಶೋರೂಂ ಮುಂಭಾಗ ಚಾಲನೆ ನೀಡಲಾಯಿತು.
ಈ ಸಂದರ್ಭ ಜೆಸಿಐ ಬಂಟ್ವಾಳದ ಅಧ್ಯಕ್ಷ ಉಮೇಶ್ ಆರ್. ಮೂಲ್ಯ, ಉದ್ಯಮಿ ದೇಜಪ್ಪ ಪೂಜಾರಿ ಪೆರಾಜೆ, ನಿಕಟಪೂರ್ವ ಅಧ್ಯಕ್ಷ ಸದಾನಂದ ಬಂಗೇರ, ನಿಕಟಪೂರ್ವ ಕಾರ್ಯದರ್ಶಿ ಗಣೇಶ್ ಕುಲಾಲ್ ಮೊಡಂಕಾಪು ಉಪಸ್ಥಿತರಿದ್ದರು.