ಬಂಟ್ವಾಳ: ಗೋಳ್ತಮಜಲು ಗ್ರಾಮಪಂಚಾಯತಿ ವ್ಯಾಪ್ತಿಯ ಅಮ್ಟೂರು ಗ್ರಾಮದ ಬಿಜೆಪಿ ಸಮಿತಿ ಹಾಗೂ ಗೋಳ್ತಮಜಲು ಗ್ರಾಮ ಪಂಚಾಯತಿ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು, ಪಂಚಾಯಿತಿ ಅಧ್ಯಕ್ಷ ಅಭಿಷೇಕ್ ಶೆಟ್ಟಿ ಹಾಗೂ ಉಪಾಧ್ಯಕ್ಷೆ ಲಕ್ಷ್ಮಿ ಪ್ರಭು ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.
ಭಾಜಪ ಎಸ್ಸಿ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸದಸ್ಯ, ಉಡುಪಿ, ಹಾಸನ, ಮಂಗಳೂರು ಎಸ್ಸಿ ಮೋರ್ಚಾದ ಜಿಲ್ಲಾ ಸಹ-ಪ್ರಭಾರಿ ದಿನೇಶ್ ಅಮ್ಟೂರು ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛಭಾರತ್ ಕನಸನ್ನು ನನಸಾಗಿಸಲು ನಾವೆಲ್ಲರೂ ಪಣತೊಡಬೇಕು, ನಮ್ಮ ಮನಸಿನ ಭಾವನೆಗಳನ್ನು ಸ್ವಚ್ಛ ಪಡಿಸುವ ಮೂಲಕ ದೇಶದ ಅಭ್ಯುದಯಕ್ಕೆ ಎಲ್ಲರೂ ಸಹಕಾರ ನೀಡ ಬೇಕು ಎಂದರು. ಈ ಸಂದರ್ಭ ವಾಹನ ಸವಾರರಲ್ಲಿ ಹಾಗೂ ಮನೆಮನೆಗಳಿಗೆ ತೆರಳಿ ಸ್ವಚ್ಛತೆಯ ಜಾಗೃತಿ ಮೂಡಿಸಲಾಯಿತು.
ಗ್ರಾ.ಪಂ.ಸದಸ್ಯ ಗೋಪಾಲಕೃಷ್ಣ ಪೂವಳ ಅವರ ಮುತುವರ್ಜಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಭಜನಾಮಂದಿರದ ಅಧ್ಯಕ್ಷ ರಮೇಶ್ ಶೆಟ್ಟಿಗಾರ್ ಭಾಜಪ ಅಮ್ಟೂರು ಸಮಿತಿಯ ಅಧ್ಯಕ್ಷರಾದ ಬೈದರಡ್ಕ ಪ್ರಭಾಕರ ಶೆಟ್ಟಿ , ಶ್ರೀಧರ ಸುವರ್ಣ ಗೋಳ್ತಮಜಲು, ಗ್ರಾಮ ಪಂಚಾಯತಿ ಸದಸ್ಯರಾದ ಸುಷ್ಮಾ ಆನಂದ್, ಪ್ರೇಮ ಗುರುವಪ್ಪ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಮಹಾಬಲ ಸಾಲ್ಯಾನ್, ಅಂಗನವಾಡಿ ಕಾರ್ಯಕರ್ತರಾದ ಸುಜಾತ ಕೊಟ್ಟಾರಿ, ಇಂದಿರಾ, ಯಶೋಧ, ಆಶಾ ಕಾರ್ಯಕರ್ತೆ ಉಮಾವತಿ ಅನಂತಾಡಿ ಶಿಕ್ಷಕ ರಾಧಾಕೃಷ್ಣ ಕುಲಾಲ್, ಮಹಿಳಾ ಮಂಡಲದ ಪ್ರಮುಖರಾದ ಇಂದಿರಾ ರೈ, ಪ್ರೇಮ ಎಸ್. ಶೆಟ್ಟಿ ಪ್ರಮುಖರಾದ ಉಮೇಶ್ ಪೂಜಾರಿ, ಯತೀಶ್ ಸಾಲ್ಯಾನ್, ಸಂದೀಪ್ ಶೆಟ್ಟಿ, ವಿಶ್ವನಾಥ್ ಕುಲಾಲ್, ಮನೋಹರ ಆಚಾರ್ಯ, ಪುಷ್ಪರಾಜ ಕುಲಾಲ್, ವಸಂತ ಕುಲಾಲ್ ಹಾಗೂ ಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು ಸರ್ವ ಸದಸ್ಯರು ಹಾಗೂ ನೇತಾಜಿ ಯುವಕ ಸಂಘ ಪೂವಳ ಇದರ ಸದಸ್ಯರು ಭಾಗವಹಿಸಿದ್ದರು.