ಬಂಟ್ವಾಳ: ಇಲ್ಲಿನ ಪಂಜಿಕಲ್ಲು ಗ್ರಾ.ಪಂ. ವ್ಯಾಪ್ತಿಯ ಪಿಲ್ಕಾಜೆಗುತ್ತು ಶ್ರೀ ಪಿಲಿಚಾಮುಂಡಿ ಜುಮಾದಿ ಬಂಟ ಮಹಿಸಂದಾಯ ಕೊಡಮಣಿತ್ತಾಯಿ ಮತ್ತು ಪರಿವಾರ ದೈವಗಳ ಧರ್ಮಚಾವಡಿಯಲ್ಲಿ ಧರ್ಮ ದೈವಗಳ ನೇಮೋತ್ಸವ ಇತ್ತೀಚೆಗೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾಕ್, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಚಾಮುಂಡೇಶ್ವರೀ ಕ್ಷೇತ್ರದ ಮಹಾಬಲ ಸ್ವಾಮೀಜಿ, ಬೆಳ್ತಂಗಡಿ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಯಂತ್ ಕೋಟ್ಯಾನ್, ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯ ದೇವೆಂದ್ರ ಹೆಗ್ಡೆ, ಗಿರಿ ಪ್ರಕಾಶ್ ಪೊಳಲಿ, ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಪಿಲ್ಕಾಜೆ ಗುತ್ತಿನ ಪ್ರಕಾಶ್ ಅಂಚನ್, ಶೇಖರ್ ಅಂಚನ್, ಪುರುಷೋತ್ತಮ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.