ಬಂಟ್ವಾಳ: ಶ್ರೀ ಪಿಲಿಚಾಮುಂಡಿ ಜುಮಾದಿ ಬಂಟ, ಮಹಿಸಂದಾಯ ಕೊಡಮಣಿತ್ತಾಯಿ ಮತ್ತು ಪರಿವಾರ ದೈವಗಳ ಧರ್ಮಚಾವಡಿ ಪಿಲ್ಕಾಜೆಗುತ್ತುವಿನಲ್ಲಿ ಧರ್ಮದೈವಗಳಿಗೆ ನೇಮೋತ್ಸವ ಮಾ.13ರಂದು ಶನಿವಾರ ನಡೆಯಲಿದೆ.
ಅಂದು ಸಂಜೆ 4.30ಕ್ಕೆ ಶ್ರೀ ಕಲ್ಲುರ್ಟಿ ದೈವಸ್ಥಾನದಿಂದ ಭಂಡಾರ ಬರಲಿದೆ. 6ಕ್ಕೆ ಪಿಲ್ಕಾಜೆ ಮಣ್ಣಿನ ಅಧಿಕಾರದ ದೈವಗಳಾದ ಶ್ರೀ ಪಿಲಿಚಾಮುಂಡಿ, ಜುಮಾದಿ ಬಂಟ, ಮಹಿಸಂದಾಯ, ಕೊಡಮಣಿತ್ತಾಯಿ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ . ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ರಾಜೇಶ್ ನಾಯ್ಕ್, ಹರೀಶ್ ಪೂಂಜಾ ಸಹಿತ ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆಎಂದು ಪ್ರಕಟಣೆ ತಿಳಿಸಿದೆ.