ಬಂಟ್ವಾಳ: ಟೈಲರ್ ಎಸೊಸಿಯೇಷನ್ ಸಂಸ್ಥಾಪನೆಯಾದ ಮಾರ್ಚ್ 7ನ್ನು ಟೈಲರ್ ಡೇ ಆಗಿ ಆಚರಿಸಲು ತೀರ್ಮಾನಿಸಲಾಗಿದ್ದು ವೃತ್ತಿಯನ್ನು ಕಲಿತು ಹೊಲಿಗೆ ಯಂತ್ರವನ್ನು ಖರೀದಿಸಲು ಅಶಕ್ತರಾಗಿರುವ ಹೊಲಿಗೆ ವೃತ್ತಿ ಬಾಂಧವರನ್ನು ಗುರುತಿಸಿ ಅವರಿಗೆ ಜನಪ್ರತಿನಿಧಿಗಳು ಹಾಗೂ ದಾನಿಗಳ ನೆರವನ್ನು ಪಡೆದು ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡುವ ಉದ್ದೇಶದಂತೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಕೆಎಸ್ಟಿಎ ವತಿಯಿಂದ ಬಂಟ್ವಾಳ ಶಾಸಕ ರಾಜೇಶ್ ನಾಕ್ ಅವರಿಗೆ ಬೇಡಿಕೆಯ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಸಮಿತಿಯ ರಾಜ್ಯ ಉಪಾಧ್ಯಕ್ಷ ಸುರೇಶ್ ಸಾಲ್ಯಾನ್, ಕ್ಷೇತ್ರ ಸಮಿತಿ ಅಧ್ಯಕ್ಷ ಈಶ್ವರ್ ಕುಲಾಲ್, ಪ್ರಧಾನ ಕಾರ್ಯದರ್ಶಿ ನಾಗೇಶ್ ಎಂ., ಕೋಶಾಧಿಕಾರಿ ಯಾದೇಶ್ ತುಂಬೆ, ನವೀನ್ ಕುಲಾಲ್, ನಿಕಟಪೂರ್ವ ಕಾರ್ಯದರ್ಶಿ ಪುರುಷೋತ್ತಮ, ಮಾಣಿಮಜಲ್, ಜಗನ್ನಾಥ ಬೊಂಡಾಲ ಉಪಸ್ಥಿತರಿದ್ದರು.