ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಇದರ ನೂತನ ಶ್ರೀದುರ್ಗಾ ಕರೆಂಕಿ ಘಟಕದ ಉದ್ಘಾಟನಾ ಸಮಾರಂಭ ಭಾನುವಾರ ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.
ಕರೆಂಕಿ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಗುರುರಾಜ್ ಭಟ್ ನೂತನ ಶಾಖೆ ಉದ್ಘಾಟಿಸಿದರು. ಅವರು ಮಾತನಾಡಿ ಧರ್ಮ ಉಳಿಯ ಬೇಕಾದರೆ ನಿಸ್ವಾರ್ಥ ಸೇವೆ ಬೇಕು. ಜನ ಸೇವೆ ಮಾಡುವ ಶಕ್ತಿಯನ್ನು ದುರ್ಗಾಪರಮೇಶ್ವರಿ ತಾಯಿ ಅನುಗ್ರಹಿಸಲಿ ಎಂದು ತಿಳಿಸಿದರು. ಪುತ್ತೂರು ಜಿಲ್ಲಾ ಕಾರ್ಯಧ್ಯಕ್ಷ ಭಾಸ್ಕರ್ ಧರ್ಮಸ್ಥಳ ಮಾತನಾಡಿ ದೇಶಕ್ಕೆ ಸಂಘಟನೆಯ ಅನಿವಾರ್ಯತೆ ಇದೆ. ಬಲಯುತವಾದ ಸಂಘಟನೆ ಇಲ್ಲದೆ ಇದ್ದರೆ ಸಾಕಷ್ಟು ತೊಂದರೆ ಅನುಭವಿಸ ಬೇಕಾಗುತ್ತದೆ. ಧರ್ಮ ರಕ್ಷಣೆಗಾಗಿ ವಿಶ್ವ ಹಿಂದೂ ಪರಿಷತ್ ಏಕಾತ್ಮಕವಾಗಿ ಕೆಲಸ ಮಾಡಿಕೊಂಡು ಬಂದಿದೆ ಎಂದರು.
ಜಿಲ್ಲಾ ಸಹ ಸಂಚಾಲಕ ಭರತ್ ಕುಮ್ಡೇಲ್, ಗುರುರಾಜ್ ಬಂಟ್ವಾಳ್, ಬಂಟ್ವಾಳ ಪ್ರಖಂಡದ ಸಂಚಾಲಕ ಶಿವಪ್ರಸಾದ್ ತುಂಬೆ
ಮಂಡಲ ಪ್ರಮುಖ್ ರಮೇಶ್ ಕನಪಾದೆ, ರೋಹಿತ್, ಕಿರಣ್, ದೀಪು, ಉಪಸ್ಥಿತರಿದ್ದರು.
ನೂತನ ಶಾಖೆಯ ಅಧ್ಯಕ್ಷರಾಗಿ ರಾಮಚಂದ್ರ ಪೂಜಾರಿ, ಉಪಾಧ್ಯಕ್ಷರಾಗಿ ಮಹೇಶ್ ಡೆಚ್ಚಾರ್
ಕಾರ್ಯದರ್ಶಿಯಾಗಿ ಬಾಲಕೃಷ್ಣ ಗೌಡ, ವಿಠಲ ಪೂಜಾರಿ ಕರೆಂಕಿ, ಸತ್ಸಂಗ ಪ್ರಮುಖ್ ಆಗಿ ಹರೀಶ್ ಕುಲಾಲ್, ಪ್ರವೀಣ್ ನಾಯ್ಕ್, ಬಜರಂಗದಳ ಸಂಚಾಲಕರಾಗಿ ಕರುಣಾಕರ ಕುಲಾಲ್, ಸಹ ಸಂಚಾಲಕರಾಗಿ ಜಗದೀಶ್ ಕುಲಾಲ್, ಗೋರಕ್ಷ ಪ್ರಮುಖ್ ಆಗಿ ಅಶ್ವಥ್, ದಿಲೀಪ್, ಲೋಕೇಶ್, ಸಾಪ್ತಾಹಿಕ ಮಿಲನ್ ಆಗಿ ಧನುಷ್, ಪ್ರವೀಣ್, ಸುರಕ್ಷ ಪ್ರಮುಖ್ ಆಗಿ ಸುಂದರ ಗೌಡ, ಪ್ರಶಾಂತ್, ವಿದ್ಯಾರ್ಥಿ ಪ್ರಮುಖ್ ಆಗಿ ರಾಕೇಶ್, ಅನುಷ್ ರಾಜ್ , ಸೇವಾ ಪ್ರಮುಖ್ ಆಗಿ ಸುರೇಶ್ ಡೆಚ್ಚಾರ್, ದಿನೇಶ್, ದುರ್ಗಾವಾಹಿನಿ ಸಂಚಾಲಕಿಯಾಗಿ ವನಿತಾ ಕರೆಂಕಿ ಆಯ್ಕೆಯಾದರು. ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.