ಬಂಟ್ವಾಳ: ದ.ಕ., ಉಡುಪಿ, ಕಾಸರಗೋಡು ಜಿಲ್ಲೆ ಸೇರಿದಂತೆ ಕರಾವಳಿ ಕರ್ನಾಟಕ ರಂಗ ಕಲಾವಿದರ ಸೇವಾ ಪರಿಷತ್ನ ಉದ್ಘಾಟನಾ ಸಮಾರಂಭ, ಪದಾಧಿಕಾರಿಗಳ ಪದಗ್ರಹಣ ಹಾಗೂ ಕಲಾವಿದರ ಸಮಾವೇಶ ಬಿ.ಸಿ.ರೋಡಿನ ಗೋಲ್ಡನ್ ಮೈದಾನದಲ್ಲಿ ನಡೆಯುವ ಕರಾವಳಿ ಕಲೋತ್ಸವದ ಡಾ.ಎ.ಪಿ.ಜಿ.ಅಬ್ದುಲ್ ಕಲಾಂ ವೇದಿಕೆಯಲ್ಲಿ ಸೋಮವಾರ ಸಂಜೆ ನಡೆಯಿತು.
ಕರಾವಳಿ ಕರ್ನಾಟಕ ರಂಗ ಕಲಾವಿದರ ಸೇವಾ ಪರಿಷತ್ನ್ನು ಕಲಾಪೋಷಕ, ಉದ್ಯಮಿ ಟಿ.ರವೀಂದ್ರ ಪೂಜಾರಿ ಅವರು ದೀಪ ಪ್ರಜ್ವಲನಗೈದು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಲಾವಿದರನ್ನು ಒಗ್ಗೂಡಿಸಿ ಅವರ ಜೀವನಕ್ಕೆ ಆಧಾರವಾಗಿ ಮತ್ತವರ ಶ್ರೇಯಸ್ಸನ್ನು ಬಯಸಿ ಹಿರಿಯ ಕಲಾವಿದರ ನೇತೃತ್ವದಲ್ಲಿ ಇಂತಹ ಸಂಘಟನೆ ಅಸ್ತಿತ್ವಕ್ಕೆ ಬಂದಿರುವುದು ಅಭಿನಂದನೀಯವಾಗಿದೆ. ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ರತ್ನಗಿರಿ ಚಿತ್ತರಂಜನ್ ಶೆಟ್ಟಿ ನುಳಿಯಾಲುಗುತ್ತು ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಕರಾವಳಿ ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಾಟಕ ರಂಗ ಹೊಸ ಅವಿಷ್ಕಾರ ದೊಂದಿಗೆ ಬೆಳೆಯುತ್ತಿರುವುದು ಶ್ಲಾಘನೀಯ, ಸಂಘಟನೆ ನಿಸ್ವಾರ್ಥ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದರು.
ಪರಿಷತ್ನ ಗೌರವ ಸಲಹೆಗಾರ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಮಾತನಾಡಿ ಮಾ.27 ರಂದು ಪರಿಷತ್ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆಯನ್ನು ಮಂಗಳೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು. ಚಿತ್ರ ನಿರ್ಮಾಪಕರಾದ ಮುಖೇಶ್ ಹೆಗ್ಡೆ, ದಯಾನಂದ ರೈ ಬೆಟ್ಟಂಪಾಡಿ, ಉದ್ಯಮಿಗಳಾದ ಪುಪ್ಪರಾಜ್ ಹೆಗ್ಡೆ, ಪ್ರೇಮ್ ಶೆಟ್ಟಿ ಸುರತ್ಕಲ್, ಕಾರ್ಕಳ ಎಪಿಎಂಸಿ ಸದಸ್ಯ ಜೆರಾಲ್ಡ್ ಡಿ’ಸಿಲ್ವ, ಕರ್ನಾಟಕ ರಕ್ಷಣಾ ವೇದಿಕೆ, ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ, ಸಂಘಟನಾ ಕಾರ್ಯದರ್ಶಿ ಸುಂದರ ರೈ ಮಂದಾರ ವೇದಿಕೆಯಲ್ಲಿದ್ದರು.
ಸೌಮ್ಯ ಯಶವಂತ್ ಭಂಡಾರಿಬೆಟ್ಟು ಅವರು ಪರಿಷತ್ನ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಪ್ರತಿಜ್ಞವಿಧಿ ಬೋಧಿಸಿದರು. ಪರಿಷತ್ ಪಧಾದಿಕಾರಿಗಳು ವೇದಿಕೆಯಲ್ಲಿದ್ದರು. ಪರಿಷತ್ ನ ಅಧ್ಯಕ್ಷ ಮೋಹನ್ ದಾಸ್ ಕೊಟ್ಟಾರಿ ಸ್ವಾಗತಿಸಿದರು. ಸ್ಥಾಪಕ ಸದಸ್ಯ ರಮೇಶ್ ರೈ ಕುಕ್ಕುವಳ್ಳಿ ಪ್ರಸ್ತಾವಿಸಿದರು. ನವೀನ್ ಶೆಟ್ಟಿ ಎಡ್ಡೆಮಾರ್ ಕಾರ್ಯಕ್ರಮ ನಿರೂಪಿಸಿದರು. ಪರಿಷತ್ ನ ಪ್ರ.ಕಾರ್ಯದರ್ಶಿ ರಾಜೇಶ್ ಕಣ್ಣೂರು ವಂದಿಸಿದರು.