ಬಂಟ್ವಾಳ: ತಾಲೂಕು ಅಮ್ಮುಂಜೆ ಗ್ರಾಮದ ನಿವಾಸಿ ಬೆನೆಡಿಕ್ಟಾ ಕಾರ್ಲೊ ಅವರನ್ನು ಕೊಲೆಗೈದ ಕೊಲೆಗಡುಕರಿಗೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸಂತ ಮೈಕಲ್ ಚರ್ಚ್ ಬೆಳ್ಳೂರು ಕಥೊಲಿಕ್ ಸಭಾ ಘಟಕ, ಕಥೊಲಿಕ್ ಸಭಾ ಬಂಟ್ವಾಳ ವಲಯ ಸಮಿತಿ, ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ ಇದರ ಅಧ್ಯಕ್ಷ ಸ್ಟೇನಿ ಲೋಬೊ ಹಾಗೂ ಪ್ರಧಾನ ಕಾರ್ಯದರ್ಶಿ ಅಲ್ಫೋನ್ಸ್ ಫೆರ್ನಾಂಡಿಸ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವೆಲೆಂಟೈನ್ ಡಿ’ಸೋಜಾ ಅವರಿಗೆ ಮನವಿ ಸಲ್ಲಿಸಲಾಯಿತು. ಫರ್ಲಾ ವೆಲಂಕಣಿ ಚರ್ಚ್ನಲ್ಲಿ ಕಳ್ಳತನ ನಡೆಸಿ ಪರಮ ಪ್ರಸಾದ ಹಾಗೂ ಇತರ ಪವಿತ್ರ ಸೊತ್ತುಗಳನ್ನು ಧ್ವಂಸಗೊಳಿಸಿದ ಆರೋಪಿಗಳನ್ನು ಬಂಧಿಸಿರುವ ಪೊಲೀಸ್ ಇಲಾಖೆಗೆ ಡಿವೈಎಸ್ಪಿ ಅವರ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು. ಅದೇ ರೀತಿ ಉಪತಹಶೀಲ್ದಾರ್ ಅವರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.