ಭಾರತದ ಹೆಮ್ಮೆಯ ಪುತ್ರ ಪ್ರಶಸ್ತಿ ಡಾ| ಎಸ್.ಎಂ. ಗೋಪಾಲಕೃಷ್ಣ ಆಚಾರ್ಯ
ಬಂಟ್ವಾಳ : ಸಾಮಾಜಿಕ ಸೇವಾಕರ್ತ, ಉದ್ಯಮಿ ಮಾರ್ನಬೈಲು ನಿವಾಸಿ ಡಾ| ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ ಅವರಿಗೆ (ಫ್ರೈಡ್ ಆಫ್ ಇಂಡಿಯಾ) ಭಾರತದ ಹೆಮ್ಮೆಯ ಪುತ್ರ ಪ್ರಶಸ್ತಿ ಲಭಿಸಿದೆ.
ಹೃದಯ ವಾಹಿನಿ ಪತ್ರಿಕೆ ಮಂಗಳೂರು, ಕನ್ನಡ ಸಂಸ್ಕೃತಿ ಇಲಾಖೆ, ತುಳು ಸಾಹಿತ್ಯ ಅಕಾಡೆಮಿ, ಕೊಂಕಣಿ ಅಕಾಡೆಮಿ, ಅರೆಭಾಷೆ ಕೋಡವ ಸಾಹಿತ್ಯ ಅಕಾಡೆಮಿಯ ಜಂಟಿ ಆಶ್ರಯದಲ್ಲಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಡಾ| ಎಸ್.ಎಂ.ಗೋಪಾಲಕೃಷ್ಣ ಆಚಾರ್ಯರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಮಾಡಿರುವ ಸೇವೆಯನ್ನು ಗುರುತಿಸಿ ಫ್ರೈಡ್ ಆಫ್ ಇಂಡಿಯಾ ಪ್ರಶಸ್ತಿಯನ್ನು ನೀಡುಲಾಗುತ್ತಿದೆ. ಫೆ. ೬ರಂದು ಕಾರವಾರ ಜಿಲ್ಲಾ ರಂಗಮಂದಿರದಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.