ಬಂಟ್ವಾಳ: ಇತ್ತೀಚೆಗೆ ಕಾರಾಜೆ ಸಮೀಪ ಬೈಕ್ ಅಪಘಾತದಲ್ಲಿ ಗಾಯಗೊಂಡ ಪಣೋಲಿಬೈಲು ಕುಲಾಲ ಕುಂಬಾರ ವೇದಿಕೆ ಸದಸ್ಯ ದಯಾನಂದ ಕುಲಾಲ್ ಪಣೋಲಿಬೈಲು ಇವರನ್ನು ಆಸ್ಪತ್ರೆಗೆ ದಾಖಲು ಮಾಡಲು ಸಹಕರಿಸಿದ ಸಜೀಪಮೂಡ ಸುಭಾಸ್ನಗರ ನಿವಾಸಿ ಸುಲೈಮಾನ್, ಕಾರಾಜೆ ನಿವಾಸಿಗಳಾದ ನಝೀಬ್ ಮತ್ತು ಜಾವಿದ್ ಅವರನ್ನು ಕುಲಾಲ ಕುಂಬಾರ ವೇದಿಕೆ ಪಣೋಲಿಬೈಲು ಇದರ ವತಿಯಿಂದ ಅಭಿನಂದಿಸಲಾಯಿತು.
ಈ ಸಂದಭ್ ಕುಲಾಲ ಕುಂಬಾರ ವೇದಿಕೆಯ ಅಧ್ಯಕ್ಷ ರಮೇಶ್ ಎಂ. ಪಣೋಲಿಬೈಲು ಭಂಡಾರದ ಮನೆ, ಪಣೋಲಿಬೈಲು ಕ್ಷೇತ್ರದ ಅನುವಂಶಿಕ ಅರ್ಚಕ ವಾಸುದೇವ ಮೂಲ್ಯ, ಮೋನಪ್ಪ ಮೂಲ್ಯ ಗೌರವಾಧ್ಯಕ್ಷ ರಮೇಶ್ ಕುಲಾಲ್, ಗೌರವ ಸಲಹೆಗಾರದ ಲಿಂಗಪ್ಪ ಕುಲಾಲ್ ಕೊರಗಪ್ಪ ಕುಲಾಲ್ ಜಾಡಕೋಡಿ, ಉಪಾಧ್ಯಕ್ಷ ಉಮೇಶ್ ಕುಲಾಲ್ ಹಾಗೂ ಕುಲಾಲ ಕುಂಬಾರ ವೇದಿಕೆ ಸದಸ್ಯರು ಉಪಸ್ಥಿತರಿದ್ದರು. .
ಸುಂದರ್ ನಗ್ರಿ ಸ್ವಾಗತಿಸಿದರು, ರಮೇಶ್ ಕುಲಾಲ್ ನಗ್ರಿ ವಂದಿಸಿದರು. ಶಿವರಾಮ್ ಮರ್ತಾಜೆ ಕಾರ್ಯಕ್ರಮ ನಿರೂಪಿಸಿದರು.