ಬಂಟ್ವಾಳ: ಪಡುಮಲೆ ಕೋಟಿ ಚೆನ್ನಯ್ಯ ಜನ್ಮಸ್ಥಾನ ಸಂಚಲನ ಟ್ರಸ್ಟ್ ಸದಸ್ಯರು ಟ್ರಸ್ಟ್ನ ಅಧ್ಯಕ್ಷ, ಕಿಯೋನಿಕ್ಸ್ ಅಧಕ್ಷರೂ ಆಗಿರುವ ಹರಿಕೃಷ್ಣ ಬಂಟ್ವಾಳ್ ನೇತೃತ್ವದಲ್ಲಿ ಶನಿವಾರ ಧರ್ಮಸ್ಥಳದ ಧಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಿದರು.
ಪಡುಮಲೆ ಕ್ಷೇತ್ರ ಜೀಣೋದ್ಧಾರ ಗೊಳ್ಳುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿರೇಂದ್ರ ಹೆಗ್ಗಡೆಯವರು ತಿರುಮಲೆ, ಶಬರಿ ಮಲೆಯಂತೆ ಪಡುಮಲೆಯೂ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದೆ ಎಂದು ತಿಳಿಸಿದರು. ಮುಂದೆ ನಡೆಯುವ ಬ್ರಹ್ಮಕಲಶೋತ್ಸವ ಸಮಿತಿಯ ಗೌರಾಧ್ಯಕ್ಷರಾಗಬೇಕು ಹಾಗೂ ಕ್ಷೇತ್ರಕ್ಕೆ ಭೇಟಿ ನೀಡಬೇಕು ಎನ್ನುವ ಟ್ರಸ್ಟ್ನ ವಿನಂತಿಯನ್ನು ಗೌರವಪೂರ್ಣವಾಗಿ ಧರ್ಮಾಧಿಕಾರಿಗಳು ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.
ಈ ಸಂದರ್ಭ ಟ್ರಸ್ಟ್ನ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಗೌರವಾಧ್ಯಕ್ಷ, ಮಾಜಿ ಶಾಸಕ ರುಕ್ಮಯಪೂಜಾರಿ, ಉಪಾಧ್ಯಕ್ಷ ವಿಜಯಕುಮಾರ್ ಸೊರಕೆ, ಪ್ರಕಾಶ್ ಅಂಚನ್, ಶೇಖರ್ ನಾರವಿ, ಶ್ರೀಧರ್ ಪಟ್ಲ, ರತನ್ ನಾಯಕ್, ವಿಶ್ವನಾಥ ಸುವರ್ಣ, ಕೋಶಾಧಿಕಾರಿ ಶೈಲೇಶ್ ಕುಮಾರ್, ನ್ಯಾಯವಾದಿಗಳಾದ ಭಗೀರಥ, ಅನಿಲ್ ಕುಮಾರ್ ಉಪ್ಪಿನಂಗಡಿ, ವೇದನಾಥ್ ಸುವರ್ಣ, ನವೀನ್ ರೈ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು.