ಬಂಟ್ವಾಳ: ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿ ಜ.೨೧ ರಂದು ಕೊರಗಜ್ಜ ದೈವದ ನೂತನ ಶಿಲಾಬಿಂಬ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ನಡೆಯಲಿರುವ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ಸ್ವಾಮಿ ಶ್ರೀ ಕೊರಗಜ್ಜ ದೈವದ ನೂತನ ಶಿಲಾಬಿಂಬದ ಮೆರವಣಿಗೆ ನಡೆಯಿತು. ಗೋರೆಮಾರ್ ಕೊರಗಜ್ಜ ಕಟ್ಟೆಯಿಂದ ದೈವದ ಸಾನಿಧ್ಯದ ವರೆಗೆ ನಡೆದ ಶೋಭಾಯಾತ್ರೆ ಮೆರವಣಿಗೆಗೆ ಕೊಳಲು, ಬ್ಯಾಂಡ್ ವಾದ್ಯದ ಹಿಮ್ಮೇಳ, ಗೊಂಬೆ ಕುಣಿತ ವಿಶೇಷ ಮೆರುಗು ನೀಡಿತು. ಅಪಾರ ಸಂಖ್ಯೆಯಲ್ಲಿ ಕೊರಗಜ್ಜ ದೈವದ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಈ ಸಂದರ್ಭ ಪುರೋಹಿತರಾದ ಲೋಕೆಶ್ ಶಾಂತಿ, ಉದ್ಯಮಿ ಸೇಸಪ್ಪ ಕೋಟ್ಯಾನ್, ಸದಾನಂದ ಶೆಟ್ಟಿ, ಭುವನೇಶ್ ಪಚ್ಚಿನಡ್ಕ, ಹರೀಶ್ ಶೆಟ್ಟಿ ಪಡು ಮೊದಲಾದವರು ಉಪಸ್ಥಿತರಿದ್ದರು.