ಬಂಟ್ವಾಳ: ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿ ಕೊರಗಜ್ಜ ದೈವದ ನೂತನ ಶಿಲಾಬಿಂಬ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ಜ.21 ರಂದು ಬೆಳಿಗ್ಗೆ 7.35ಕ್ಕೆ ನಡೆಯಲಿದೆ.
ಜ.19 ರಂದು ಸಂಜೆ 4 ಗಂಟೆಗೆ ಸ್ವಾಮಿ ಕೊರಗಜ್ಜ ದೈವದ ನೂತನ ಶಿಲಾಬಿಂಬ ಗೋರೆಮಾರ್ ಕೊರಗಜ್ಜ ಕಟ್ಟೆಯಿಂದ ದೈವದ ಸಾನಿಧ್ಯಕ್ಕೆ ಮೆರವಣಿಗೆಯ ಮೂಲಕ ಆಗಮಿಸಲಿದೆ. ಜ.23 ರಂದು ಶನಿವಾರ ರಾತ್ರಿ 7ಕ್ಕೆಮುಗೆರ್ಕಳ ಭಂಡಾರ ಇಳಿಯುವುದು, ರಾತ್ರಿ 8 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 10ಕ್ಕೆ ತನ್ನಮಾನಿಗ ಗರಡಿ ಇಳಿಯುವುದು,ಡಿ.24 ಬೆಳಿಗ್ಗೆ ಗಂಟೆ 5 ರಿಂದ ಕೊರಗಜ್ಜ ದೈವದ ಕೋಲೋತ್ಸವ. 8ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಗಂಟೆ 7 ರಿಂದ ಕೊರಗಜ್ಜ ದೈವಕ್ಕೆ ಹರಕೆಯ ಕೋಲೋತ್ಸವ ನಡೆಯಲಿದೆ.